ETV Bharat / bharat

ಬಿಹಾರದ 27 ಕ್ಷೇತ್ರ, ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ! - Shooter Shreyasi Singh

ಬಿಹಾರದ ವಿಧಾನಸಭೆಯ 27 ಕ್ಷೇತ್ರ ಹಾಗೂ ಮಧ್ಯಪ್ರದೇಶದ ಉಪ ಚುನಾವಣೆಯ 28 ಸ್ಥಾನಗಳಿಗೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

Shooter Shreyasi Singh
Shooter Shreyasi Singh
author img

By

Published : Oct 6, 2020, 10:28 PM IST

ನವದೆಹಲಿ: 243 ಕ್ಷೇತ್ರಗಳ ಬಿಹಾರ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಮೊದಲ ಪಟ್ಟಿ ರಿಲೀಸ್​ ಮಾಡಿದ್ದು, 27 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ವಿಶೇಷವೆಂದರೆ ಕಳೆದ ಕೆಲ ದಿನಗಳ ಹಿಂದೆ ಪಕ್ಷ ಸೇರಿಕೊಂಡಿದ್ದ ಶೂಟರ್​​ ಶ್ರೇಯಸಿ ಸಿಂಗ್​​​ ಜಮುಯಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಬಿಹಾರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಜೆಡಿಯು ನಡುವಿನ ಸೀಟು ಹಂಚಿಕೆ ಇಂದು ಫೈನಲ್​ ಆಗಿದೆ. ಉಭಯ ಪಕ್ಷಗಳು ಕ್ರಮವಾಗಿ 121(ಬಿಜೆಪಿ) 122(ಜೆಡಿಯು) ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ಹೀಗಾಗಿ ಬಿಜೆಪಿ ತನ್ನ ಮೊದಲ ಪಟ್ಟಿ ರಿಲೀಸ್​ ಮಾಡಿದೆ.

ಮಧ್ಯಪ್ರದೇಶದ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ

  • BJP releases a list of 28 candidates for the upcoming by-elections to the legislative assembly of Madhya Pradesh and 1 candidate for Telangana by-election.

    Tulsiram Silawat to contest from Sanwer, Bisahulal Singh from Anuppur and Suresh Dhakad from Pohari. pic.twitter.com/AXObqjXYG7

    — ANI (@ANI) October 6, 2020 " class="align-text-top noRightClick twitterSection" data=" ">

ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಲ್ಲಿನ ಉಪಚುನಾವಣೆಗೂ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಕಾಂಗ್ರೆಸ್​ ಶಾಸಕರು ರಾಜೀನಾಮೆ ಹಾಗೂ ಮೂರು ಕ್ಷೇತ್ರಗಳಲ್ಲಿ ಶಾಸಕರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ತೆಲಂಗಾಣದ ಒಂದು ಕ್ಷೇತ್ರಕ್ಕೂ ಪಕ್ಷ ಅಭ್ಯರ್ಥಿ ಘೋಷಣೆ ಮಾಡಿದೆ. ಈ ಕ್ಷೇತ್ರಗಳಿಗೆ ನವೆಂಬರ್​ ರಂದು ಚುನಾವಣೆ ನಡೆಯಲಿದ್ದು, ನವೆಂಬರ್​ ರಂದು ಫಲಿತಾಂಶ ಹೊರಬಿಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.