ETV Bharat / bharat

ಎಂಪಿ 'ರಾಜಕೀಯ ರಾಮಾಯಣ'; ಸಿಂಧಿಯಾರನ್ನ 'ವಿಭೀಷಣ' ಎಂದು ಉದ್ಘರಿಸಿದ ಚೌಹಾಣ್!

author img

By

Published : Mar 14, 2020, 1:32 PM IST

ಮಧ್ಯಪ್ರದೇಶದಲ್ಲಿ 'ರಾಜಕೀಯ ರಾಮಾಯಣ' ಶುರುವಾಗಿದೆ. ಕಲಿಯುಗದ ರಾಮಾಯಣದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರನ್ನು 'ವಿಭೀಷಣ' ಎಂದು ಕರೆದ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಈಗಿನ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು 'ರಾವಣ' ಎಂದು ಕರೆಯುವ ಮೂಲಕ ಟೀಕಿಸಿದ್ದಾರೆ.

vibhishan
ವಿಭೀಷಣ

ಭೋಪಾಲ್​ : ಇತ್ತೀಚೆಗೆ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಅದ್ಧೂರಿಯಾಗಿ ಪಕ್ಷಕ್ಕೆ ಸ್ವಾಗತಿಸಿದ ಮಧ್ಯಪ್ರದೇಶದ ಮಾಜಿ ಸಿಎಂ ಮತ್ತು ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಕಾಂಗ್ರೆಸ್ ಮುಖಂಡರನ್ನು 'ವಿಭೀಷಣ' ಎಂದು ಕರೆದಿದ್ದಾರೆ.

ಸಿಂಧಿಯಾ ಬಿಜೆಪಿ ಕಚೇರಿ ತಲುಪುತ್ತಿದ್ದಂತೆಯೇ ಅವರನ್ನು ಸ್ವಾಗತಿಸಿದ ಚೌಹಾಣ್​, ಸಿಂಧಿಯಾಗೆ ರಾಮಾಯಣದ ಕಥೆಯನ್ನು ನಿರೂಪಿಸಲು ಪ್ರಾರಂಭಿಸಿದರು. ಕಲಿಯುಗದ ರಾಮಾಯಣದಲ್ಲಿ ಸಿಂಧಿಯಾ ಅವರನ್ನು 'ವಿಭೀಷಣ' ಮತ್ತು ಮಧ್ಯಪ್ರದೇಶದ ಈಗಿನ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು 'ರಾವಣ' ಎಂದು ಕರೆದು ಚೌಹಾಣ್ ಟೀಕಿಸಿದ್ದಾರೆ.

ಶ್ರೀ ರಾಮ ವಿಭೀಷಣನ ಸಹಾಯದಿಂದ ಲಂಕಾವನ್ನು ಹೇಗೆ ವಶಪಡಿಸಿಕೊಂಡನೆಂದು ಚೌಹಾಣ್​ ತಮ್ಮ ವಿವರಣೆಯ ಸಂದರ್ಭದಲ್ಲಿ ಹೇಳಿದರು. ಲಂಕಾಗೆ ಬೆಂಕಿಯಿಡಲು ಅಂದು ವಿಭೀಷಣನ ಅಗತ್ಯವಿತ್ತು. ಅದೇ ರೀತಿ ಈಗ ಸಿಂಧಿಯಾ ಅವರು ನಮ್ಮೊಂದಿಗಿದ್ದಾರೆ ಎಂದು ಶಿವರಾಜ್, ಸಿಂಧಿಯಾರ ಗುಣಗಾನ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.