ಹೈದರಾಬಾದ್: ಕೊರೊನಾ ಸೋಂಕು ತೆಲಂಗಾಣ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ಅವರ ಕಚೇರಿಗೆ ವಕ್ಕರಿಸಿದ್ದು, ಇಬ್ಬರು ಚಾಲಕರು, ಮೂವರು ಗನ್ ಮ್ಯಾನ್ಗಳು ಮತ್ತು ಸಚಿವರ ಇಬ್ಬರು ಸಹಾಯಕರು ಸೋಂಕಿಗೆ ತುತ್ತಾಗಿದ್ದಾರೆ.
ಸಚಿವ ರಾಜೇಂದರ್ ಅವರಿಗೂ ಕೋವಿಡ್ ಪರೀಕ್ಷೆ ನಡೆಸಿದ್ದು, ಯಾವುದೇ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ಸಚಿವರು ಕಚೇರಿಗೆ ಹಾಜರಾಗದೆ ಅವರ ನಿವಾಸದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆರೋಗ್ಯ ಮತ್ತು ಪುರಸಭೆ ಸಿಬ್ಬಂದಿ ಬಿ.ಆರ್.ಕೆ ಭವನದಲ್ಲಿರುವ ಸಚಿವರ ಕಚೇರಿಯನ್ನು ಸ್ಟಾನಿಟೈಸ್ ಮಾಡಿದ್ದಾರೆ. ಈ ಹಿಂದೆ ಬಿಆರ್‌ಕೆ ಭವನದ ವಿವಿಧ ಇಲಾಖೆಗಳ ನೌಕರರು ಸೋಂಕಿಗೆ ಒಳಗಾಗಿದ್ದರು. ಆದರೆ ಆರೋಗ್ಯ ಸಚಿವರ ಕಚೇರಿಯಲ್ಲಿನ ಸಿಬ್ಬಂದಿ ಇದೇ ಮೊದಲಬಾರಿಗೆ ಸೋಂಕಿಗೆ ತುತ್ತಾಗಿದ್ದಾರೆ.
ತೆಲಂಗಾಣದಲ್ಲಿ ಈವರೆಗೆ 1.69 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 1,025 ಸಾವುಗಳು ವರದಿಯಾಗಿವೆ.