ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಗೆ ನಡೆಸುತ್ತಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯನ್ನ ಭಾರತೀಯ ಸೇನೆ ಹೊಡೆದುರುಳಿಸಿ ಇಂದಿಗೆ 3 ವರ್ಷ ಕಳೆದಿದೆ.
ಮೃತ ಉಗ್ರನನ್ನ ಹುತಾತ್ಮ ಎಂದು ಘೋಷಿಸಿದ್ದ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಿದ್ದರು. ಈ ಹಿಂಸಾಚಾರಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 100 ಜನ ಬಲಿಯಾಗಿದ್ದರು.
-
Jammu & Kashmir: Shut down in Srinagar today, on the 3rd death anniversary of terrorist Burhan Wani. pic.twitter.com/QLc07Mxu8r
— ANI (@ANI) July 8, 2019 " class="align-text-top noRightClick twitterSection" data="
">Jammu & Kashmir: Shut down in Srinagar today, on the 3rd death anniversary of terrorist Burhan Wani. pic.twitter.com/QLc07Mxu8r
— ANI (@ANI) July 8, 2019Jammu & Kashmir: Shut down in Srinagar today, on the 3rd death anniversary of terrorist Burhan Wani. pic.twitter.com/QLc07Mxu8r
— ANI (@ANI) July 8, 2019
ಪ್ರತ್ಯೇಕತಾವಾದಿಗಳು ಉಗ್ರ ಬುರ್ಹಾನ್ ವಾನಿಯ ಮೂರನೇ ವರ್ಷದ ಸಮಾರಾಧನೆ ಹಮ್ಮಿಕೊಂಡಿದ್ದು, ಪ್ರತಿಭಟನೆಗೆ ಕರ ಕೊಟ್ಟಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಶ್ಮೀರದಾದ್ಯಂತ ಮೊಬೈಲ್ ಇಂಟರ್ನೆ ಸೇವೆ ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲೂ ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಅನಂತ್ ನಾಗ್ ಜಿಲ್ಲೆಯಲ್ಲಿ 2016ರ ಜುಲೈ 8ರಂದು ಉಗ್ರ ಬುರ್ಹಾನ್ ವಾನಿಯನ್ನು ಭಾರತೀಯ ಸೇನೆ ಬೇಟೆಯಾಡಿತ್ತು. ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಉಲ್ಬಣಗೊಂಡಿತ್ತು.