ETV Bharat / bharat

ಕೋವಿಡ್ ಲಸಿಕೆ ಮೇಲೆ ನಕ್ಸಲರ ಕಣ್ಣು : ಬಾಲಘಾಟ್​ನಲ್ಲಿ ಹೈಅಲರ್ಟ್

ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯು ಜಬಲ್ಪುರ ವಿಭಾಗದಿಂದ 9,660 ಡೋಸ್ ಕೋವಿಡ್ ಲಸಿಕೆಗಳನ್ನು ಪಡೆದಿದ್ದು, ಲಸಿಕೆಗಳನ್ನು ಸುರಕ್ಷಿತವಾಗಿರಿಸಲಾಗಿದೆ. ಕೋವಿಡ್-19 ಲಸಿಕೆಯನ್ನು ಲೂಟಿ ಮಾಡಲು ನಕ್ಸಲರು ಪ್ರಯತ್ನಿಸಬಹುದು ಎಂದು ಆಡಳಿತವು ಹೈಅಲರ್ಟ್ ಆಗಿದೆ.

Balaghat Corona Vaccination Campaign
ಬಾಲಘಾಟ್​ನಲ್ಲಿ ಹೈಅಲರ್ಟ್
author img

By

Published : Jan 16, 2021, 9:27 AM IST

ಬಾಲಘಾಟ್(ಮಧ್ಯಪ್ರದೇಶ): ಇಂದಿನಿಂದ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್​ಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಂತೆ ಯಾವುದೇ ನಕ್ಸಲ್​ ಚಟುವಟಿಕೆಯನ್ನು ಎದುರಿಸಲು ಬಾಲಘಾಟ್ ಪೊಲೀಸರನ್ನು ಎಚ್ಚರಿಕೆ ವಹಿಸಿದ್ದಾರೆ.

ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯು, ಜಬಲ್ಪುರ ವಿಭಾಗದಿಂದ 9,660 ಡೋಸ್ ಕೋವಿಡ್ ಲಸಿಕೆಗಳನ್ನು ಪಡೆದಿದ್ದು, ಲಸಿಕೆಗಳನ್ನು ಸುರಕ್ಷಿತವಾಗಿರಿಸಲಾಗಿದೆ. ಕೋವಿಡ್-19 ಲಸಿಕೆಯನ್ನು ಲೂಟಿ ಮಾಡಲು ನಕ್ಸಲರು ಪ್ರಯತ್ನಿಸಬಹುದು ಎಂದು ಆಡಳಿತವು ಈ ಕ್ರಮ ಕೈಗೊಂಡಿದೆ.

ಬಾಲಘಾಟ್ ಜಿಲ್ಲಾ ಆಸ್ಪತ್ರೆ ಮತ್ತು ಬಾಲಘಾಟ್ ಸಮುದಾಯ ಆರೋಗ್ಯ ಕೇಂದ್ರ ಲಂಜಿಯಲ್ಲಿ ವ್ಯಾಕ್ಸಿನೇಷನ್ ನಡೆಯಲಿದ್ದು, ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿವಾರಿ ಹೇಳಿದ್ದಾರೆ. ಕೊರೊನಾ ವ್ಯಾಕ್ಸಿನೇಷನ್ ಸೈಟ್ ಸುತ್ತಲೂ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ನಕ್ಸಲ್​ ಚಟುವಟಿಕೆಗಳ ದೃಷ್ಟಿಯಿಂದ ಬಾಲಘಾಟ್ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.