ETV Bharat / bharat

ಕೋಮುವಾದ ಮಸುಕಾಗುತ್ತಿರುವುದಕ್ಕೆ ಅಯೋಧ್ಯಾ ತೀರ್ಪು ಬಲವಾದ ಸಾಕ್ಷಿಯೆ?

author img

By

Published : Nov 25, 2019, 3:14 PM IST

Updated : Nov 25, 2019, 3:27 PM IST

ಅಯೋಧ್ಯಾ ತೀರ್ಪಿನ ದಿನ ಗಲಭೆಯ ಭಯದಿಂದ ಯಾವುದೇ ಮಸೀದಿಗಾಗಲಿ, ದೇವಸ್ಥಾನಕ್ಕಾಗಲಿ ಭದ್ರತೆ ನೀಡಿರಲಿಲ್ಲ. ಅಷ್ಟರ ಮಟ್ಟಿಗೆ ದೇಶ ಬದಲಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಅಯೋಧ್ಯಾ ತೀರ್ಪು

ದಶಕಗಳಿಂದ ಬಗೆಹರಿಯದೆ ಬಾಕಿ ಉಳಿದಿದ್ದ ಅತೀ ಸೂಕ್ಷ್ಮವಾದ ಅಯೋಧ್ಯಾ ವಿವಾದದಲ್ಲಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ತೀರ್ಪಿನ ನಂತರ ಕೋಮುವಾದ ಬಲವನ್ನು ಪಡೆಯಬಹುದೆ? ಅಪನಂಬಿಕೆ ಮತ್ತು ತಪ್ಪುಗ್ರಹಿಕೆಯಿಂದ ತುಂಬಿದ್ದ ಮೂರು ದಶಕಗಳ ಇತಿಹಾಸವು ಕ್ರಮೇಣ ಮಸುಕಾಗಬಹುದೆ? ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಧಾರ್ಮಿಕ ಸ್ಥಳಗಳ ಬಗ್ಗೆ ಹಸ್ತಕ್ಷೇಪ ಮಾಡದೆ, ಘರ್ಷಣೆ ಹುಟ್ಟಹಾಕದೆ ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳಬಹುದೆ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಸುಪ್ರೀಂಕೋರ್ಟ್‌ ತೀರ್ಪಿನ ನಂತರ ಎರಡೂ ಕೋಮಿನ ಕಡೆಯಿಂದ ಯಾವುದೇ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ. ಇನ್ನೂ ವಿಶೇಷವೆಂದರೆ ತೀರ್ಪಿನ ದಿನ ಗಲಭೆಯ ಭಯದಿಂದ ಯಾವುದೇ ಮಸೀದಿಗಾಗಲಿ, ದೇವಸ್ಥಾನಕ್ಕಾಗಲಿ ಭದ್ರತೆ ನೀಡಿರಲಿಲ್ಲ. ಅಷ್ಟರ ಮಟ್ಟಿಗೆ ದೇಶ ಬದಲಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಸರ್ವೋಚ್ಛ ನ್ಯಾಯಾಲಯವು ತನ್ನ 1,110 ಪುಟಗಳ ಸುದೀರ್ಘ ತೀರ್ಪಿನಲ್ಲಿ ಜಾತ್ಯತೀತತೆಯ ಬಗ್ಗೆ ಹಲವಾರು ವಿಷಯಗಳನ್ನು ಉಲ್ಲೇಖಿಸಿದೆ. ಜೊತೆಗೆ ಸಮಾಜದ ಹಲವಾರು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದೆ. ಹೀಗಾಗಿ ಭವಿಷ್ಯದಲ್ಲಿ ಧಾರ್ಮಿಕ ಸ್ಥಳಗಳ ಬಗ್ಗೆ ವಿವಾದಗಳು ಉದ್ಭವಿಸುವ ಸಂಭವನೀಯತೆ ಕಡಿಮೆ. ಗತಿಸಿಹೋದ ಇತಿಹಾಸದ ಅನ್ಯಾಯ ಅಥವಾ ಇತರ ಧರ್ಮಗಳು ಅತಿಕ್ರಮಣದ ನೆಪದಲ್ಲಿ ಯಾವುದೇ ಬಲವಂತದ ಹಿಂಸಾಚಾರ ಅಸಂವಿಧಾನಿಕ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟವಾಗಿದೆ ಹೇಳಿದೆ.

ಬಾಬ್ರಿ ಮಸೀದಿ ಧ್ವಂಸವನ್ನು ಕಾನೂನಿನ ಉಲ್ಲಂಘನೆ ಮತ್ತು ತಾತ್ಕಾಲಿಕ ಪ್ರಚೋದನೆಯ ಕ್ರಮವಲ್ಲ ಎಂದು ಸುಪ್ರೀಂಕೋರ್ಟ್‌ ಪರಿಗಣಿಸಿದೆ. 450 ವರ್ಷಗಳ ಹಿಂದೆ ನಿರ್ಮಿಸಲಾದ ಮುಸ್ಲಿಮರ ಪವಿತ್ರ ಪೂಜಾ ಸ್ಥಳವನ್ನು ಬಲವಂತವಾಗಿ ಸ್ಥಳಾಂತರಿಸುವಂತೆ ಆದೇಶಿಸಿದೆ. ಜೊತೆಗೆ, ಮುಸ್ಲಿಂರಿಗೆ ಪರ್ಯಾಯ ಭೂಮಿಯನ್ನು ನೀಡದ ಹೊರತು ಈ ನ್ಯಾಯ ಪೂರ್ಣಗೊಳ್ಳುವುದಿಲ್ಲ. ಸಮಾನ ನ್ಯಾಯಕ್ಕೆ ಬದ್ಧವಾಗಿರುವ ಭಾರತದಂತಹ ಜಾತ್ಯತೀತ ದೇಶದಲ್ಲಿ, ಇಂತಹ ಕೃತ್ಯವನ್ನು ಪರಿಗಣಿಸಲಾಗುವುದಿಲ್ಲ ಎಂದೂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ಜಾತ್ಯತೀತತೆಯನ್ನು ಪಾಶ್ಚಿಮಾತ್ಯ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಳ್ಳುವ ಒಂದು ವರ್ಗ ದೇಶದಲ್ಲಿದೆ. ತಮ್ಮ ರಾಷ್ಟ್ರವನ್ನು ಕ್ರಿಯಾಶೀಲ ಅಥವಾ ಪೂಜಾ ಸ್ಥಳವಾಗಿ ನೋಡಲಾಗದವರು ಮತ್ತು ತಮ್ಮ ರಾಷ್ಟ್ರದಿಂದ ಹೊರಗೆ ನೋಡಲಾಗದವರು ಎಂದಿಗೂ ರಾಷ್ಟ್ರೀಯ ಸಂಸ್ಕೃತಿಯ ಭಾಗವಾಗಲು ಸಾಧ್ಯವಿಲ್ಲ ಎಂಬ ವಿಲಕ್ಷಣ ವಾದವೊಂದು 1920ರ ದಶಕದಿಂದಲೂ ಚಾಲ್ತಿಯಲ್ಲಿದೆ.

ಕಳೆದ ಮೂರು ದಶಕಗಳಲ್ಲಿ, ಈ ಕಲ್ಪನೆಯನ್ನು ಬಲಪಡಿಸಲಾಗಿತ್ತು. ಸಂವಿಧಾನದ ಪ್ರಕಾರ ಬದುಕುವುದು ತೃಪ್ತಿದಾಯಕವಲ್ಲ ಎಂದು ನಂಬುವವರಿದ್ದರು. ತಲೆಮಾರುಗಳಷ್ಟು ಹಳೆಯದಾದ ಸಂಸ್ಕೃತಿಯಿಂದ ಪ್ರೇರಿತರಾಗದೆ ರಾಷ್ಟ್ರೀಯತೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಭಾವಿಸುವ ಬುದ್ಧಿಜೀವಿಗಳಿಗೂ ಕೊರತೆಯಿರಲಿಲ್ಲ. ಆದರೆ ಸುಪ್ರೀಂಕೋರ್ಟ್‌ನ ತೀರ್ಪು ಇವರೆಲ್ಲರಿಗೂ ಪಾಠದಂತಿದೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ನಂತರ, ಜಾತ್ಯತೀತತೆಯ ಪರಿಕಲ್ಪನೆಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿವೆ. ಹುಸಿ ಜಾತ್ಯತೀತತೆ ಎಂಬ ಪದವು ರಾಜಕೀಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಪದವಾಗಿದೆ.

1,500 ಯಾರ್ಡ್‌ ವಿವಾದಿತ ಭೂಮಿಯನ್ನು ನಿರ್ಧರಿಸುವಲ್ಲಿ ಕೇವಲ ನಂಬಿಕೆಯನ್ನು ಮಾತ್ರ ಪರಿಗಣಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಹಲವಾರು ಭಾಗಗಳಲ್ಲಿ ಸ್ಪಷ್ಟಪಡಿಸಿದೆ. ತೀರ್ಪು ಜಾತ್ಯತೀತತೆ, ಸಮಾನ ನ್ಯಾಯ ಮತ್ತು ಸರಿಯಾದ ಪುರಾವೆಗಳನ್ನು ಆಧರಿಸಿದೆ. ದೇವಾಲಯ-ಮಸೀದಿ ಸಂಘರ್ಷವು ಕೇವಲ ರಾಜಕೀಯವಾಗಿ ದೇಶವನ್ನು ಅಲುಗಾಡಿಸಲಿಲ್ಲ, ಜೊತೆಗೆ ಜಾತ್ಯತೀತತೆಯನ್ನು ಅಲ್ಲಾಡಿಸಿತ್ತು ಎಂದು ಅದು ಹೇಳಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್‌ ಜಾತ್ಯತೀತತೆಯ ಬಗ್ಗೆ ಆಳವಾದ ವಿವರಣೆಯನ್ನು ನೀಡಿದೆ. ಜಾತ್ಯತೀತತೆಯನ್ನು ವೈಯಕ್ತಿಕ ಆಯ್ಕೆ ಅಥವಾ ಸಿದ್ಧಾಂತವೆಂದು ನ್ಯಾಯಾಲಯ ಪರಿಗಣಿಸಲಿಲ್ಲ. ಧಾರ್ಮಿಕ ಸಹಿಷ್ಣುತೆಯು ಸಾಂವಿಧಾನಿಕ ಚೌಕಟ್ಟಿನ ಒಂದು ಭಾಗವಾಗಿದೆ. ಹೀಗಾಗಿ ಸಂವಿಧಾನದದಲ್ಲಿ ಜಾತ್ಯಾತೀತತೆಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ನ್ಯಾಯಾಂಗ, ಸರ್ಕಾರ ಮತ್ತು ನಾಗರಿಕರು ಜಾತ್ಯತೀತತೆಗೆ ಬದ್ಧರಾಗಿರಬೇಕು ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬೊಮ್ಮಾಯಿ ಪ್ರಕರಣದ ವಿಚಾರಣೆಯ ವೇಳೆ ಒಂಬತ್ತು ಸದಸ್ಯರ ನ್ಯಾಯಾಧೀಶರ ಸಮಿತಿಯನ್ನು ಒಳಗೊಂಡ ನ್ಯಾಯಮೂರ್ತಿ ಜೀವನ್ ರೆಡ್ಡಿ ಜಾತ್ಯತೀತತೆಗೆ ಸ್ಪಷ್ಟ ವ್ಯಾಖ್ಯಾನ ನೀಡಿದ್ದರು. ಧಾರ್ಮಿಕ ಸಂಘರ್ಷದ ಸಮಯದಲ್ಲಿ ತಟಸ್ಥ ನಿಲುವನ್ನು ಜಾತ್ಯತೀತತೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದ್ದರು. ಅಯೋಧ್ಯೆಯ ತೀರ್ಪಿನ ಸಮಯದಲ್ಲಿ, ಸುಪ್ರೀಂಕೋರ್ಟ್‌ ಜೀವನ್ ರೆಡ್ಡಿ ಅವರ ಮಾತುಗಳನ್ನು ಉಲ್ಲೇಖಿಸಿದ್ದು, ಜಾತ್ಯತೀತತೆಯು ನಾವು ತಲುಪಬೇಕಾದ ಅತ್ಯುನ್ನತ ಗುರಿ ಮತ್ತು ಅದು ಭಾರತೀಯ ಸಂವಿಧಾನದ ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಪುನರುಚ್ಚರಿಸಿದೆ.

ಧಾರ್ಮಿಕ ಪೂಜಾ ಸ್ಥಳಗಳ ಬಗ್ಗೆ ಮತ್ತಷ್ಟು ವಿವಾದಗಳು ಉಂಟಾಗುವುದನ್ನು ತಡೆಯಲು, ಸುಪ್ರೀಂಕೋರ್ಟ್‌ ಪೂಜಾ ಸ್ಥಳಗಳ ಕಾಯ್ದೆ 1991 ಅನ್ನು ಹಲವಾರು ಬಾರಿ ಉಲ್ಲೇಖಿಸಿದೆ. ಆಗಸ್ಟ್ 15, 1947 ರಂತೆ ಅಸ್ತಿತ್ವದಲ್ಲಿದ್ದ ಯಾವುದೇ ಪೂಜಾ ಸ್ಥಳವನ್ನು ಪರಿವರ್ತಿಸುವುದನ್ನು ನಿಷೇಧಿಸಲು ಈ ಕಾಯ್ದೆಯನ್ನು ಮಾಡಲಾಗಿದೆ. ಇತರ ಧರ್ಮಗಳು ತಮ್ಮ ಪೂಜಾ ಸ್ಥಳವನ್ನು ಅತಿಕ್ರಮಿಸಿವೆ ಎಂದು ಘೋಷಿಸುವ ಮೂಲಕ ಯಾರಾದರೂ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿದರೆ, ಈ ಕಾಯಿದೆಯಡಿ ಶಿಕ್ಷೆಯಾಗುತ್ತದೆ.

ಪೂಜಾ ಸ್ಥಳಗಳ ಮತಾಂತರವನ್ನು ಆಲಿಸುವ ಯಾವುದೇ ಪ್ರಕರಣಗಳನ್ನು ತೆಗೆದುಕೊಳ್ಳುವುದನ್ನು ಈ ಕಾಯ್ದೆ ನಿರ್ಬಂಧಿಸಿದೆ. ಅಯೋಧ್ಯೆ ಪ್ರಕರಣಕ್ಕೆ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿತ್ತು. ಜಾತ್ಯತೀತತೆಯನ್ನು ಸಂರಕ್ಷಿಸಲು ಈ ಕಾಯ್ದೆ ಮಾಡಲಾಗಿದೆ ಮತ್ತು ಅದನ್ನು ಯಾರೂ ಉಲ್ಲಂಘಿಸಬಾರದು. ನಂಬಿಕೆ ಎಂಬುದು ನಂಬಿಕೆಯಷ್ಟೆ. ಅದು ಜನಸಂಖ್ಯೆಯ ಬಹುಸಂಖ್ಯಾತ ವರ್ಗದ್ದಾಗಿರಬಹುದು ಅಥವಾ ಅಲ್ಪಸಂಖ್ಯಾತ ವರ್ಗದವರಾಗಿರಬಹುದು. ಹೀಗಾಗಿ ಭೂಮಿಯ ಸರಿಯಾದ ಮಾಲೀಕತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕಾನೂನು ಮತ್ತು ನಿರ್ದೇಶನಗಳನ್ನು ಅನುಸರಿಸಿದ ನಂತರವೇ ಸರಿಯಾದ ತೀರ್ಮಾನಕ್ಕೆ ಬರಲಾಗಿದೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಮುಸ್ಲಿಂ ಪಕ್ಷದ ವಕೀಲರಲ್ಲದೆ, ಹಲವಾರು ಬುದ್ಧಿಜೀವಿಗಳು ನಂಬಿಕೆ ಮತ್ತು ಶ್ರದ್ಧೆಯ ಆಧಾರದ ಮೇಲೆ ತೀರ್ಪು ನೀಡದಂತೆ ನ್ಯಾಯಾಲಯವನ್ನು ಕೋರಿದ್ದರು. ಈ ವಿನಂತಿಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ತನ್ನ ತೀರ್ಪಿನ ಆಧಾರವನ್ನು ಎಲ್ಲಿ ಸಾಧ್ಯವೋ ಅಲ್ಲಿ ವಿವರಿಸಿದೆ.

ಬಾಬರಿ ಮಸೀದಿಯ ಪರಂಪರೆಯನ್ನು ನ್ಯಾಯಾಲಯ ತಳ್ಳಿಹಾಕಲಿಲ್ಲ. 1949 ರ ಡಿಸೆಂಬರ್‌ನಲ್ಲಿ ಮಸೀದಿ ಸಂಕೀರ್ಣದಲ್ಲಿ ಹಿಂದೂ ದೇವತೆಗಳನ್ನು ಸ್ಥಾಪಿಸಿರುವುದನ್ನು ಅದು ನಿರಾಕರಿಸಲಿಲ್ಲ. 1949 ರ ಡಿಸೆಂಬರ್ 16 ರವರೆಗೆ ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು ಎಂಬ ಅಂಶಕ್ಕೆ ನ್ಯಾಯಾಲಯ ಸಮ್ಮತಿಸಿದೆ. ಹಿಂದೂ ದೇವತೆಗಳನ್ನು ಅಲ್ಲಿ ಇರಿಸಿದ ನಂತರ ಪ್ರಾರ್ಥನೆಗಳು ನಿಂತುಹೋದವು ಎಂಬುದನ್ನು ಉಲ್ಲೇಖಿಸಿದೆ. ಆದರೆ ಮೂರು ಗುಮ್ಮಟಗಳನ್ನು ಹೊಂದಿದ್ದ ಮುಖ್ಯ ಸಂಕೀರ್ಣವು 1857 ಕ್ಕಿಂತ ಮೊದಲು ತಮ್ಮ ನಿಯಂತ್ರಣದಲ್ಲಿತ್ತು ಎಂದು ಮುಸ್ಲಿಂ ಪಕ್ಷಕ್ಕೆ ಪ್ರಕರಣ ವಿಚಾರಣೆ ವೇಳೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

ಅವಧ್ ರಾಜ್ಯವು 1856ರಲ್ಲಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತ್ತು. ಅಂದರೆ 1857 ಕ್ಕಿಂತಲೂ ಹಿಂದೆಯೇ ಹಿಂದೂಗಳು ಪ್ರಾರ್ಥನೆ ಸಲ್ಲಿಸಿದ ಪುರಾವೆಗಳಿವೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹಿಂದೂ-ಮುಸ್ಲಿಂ ಸಂಘರ್ಷವನ್ನು ತಪ್ಪಿಸಲು, 1857 ರಲ್ಲಿ ಬ್ರಿಟಿಷ್ ಅಧಿಕಾರಿಗಳು 1500 ಯಾರ್ಡ್‌ ಮಧ್ಯದಲ್ಲಿ ಗೋಡೆ ನಿರ್ಮಿಸಿದ್ದಾರೆ. ಆಗಲೂ ಹಿಂದೂಗಳು ಇಡೀ ಭಾಗವನ್ನು ರಾಮ ಜನ್ಮಭೂಮಿ ಎಂದು ಪರಿಗಣಿಸುವುದನ್ನು ನಿಲ್ಲಿಸಲಿಲ್ಲ. ಅವರು ಸ್ಥಳದ ಉಳಿದ ಭಾಗದಲ್ಲೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮುಖ್ಯ ಗುಮ್ಮಟವು ದೇವಾಲಯದ ಗರ್ಭಗುಡಿ ಎಂದು ನಂಬುವುದನ್ನು ಅವರು ನಿಲ್ಲಿಸಿರಲಿಲ್ಲ ಮತ್ತು ಅಲ್ಲಿಗೆ ಹೋಗಲು ಹಲವು ಬಾರಿ ಪ್ರಯತ್ನಿಸಿದ್ದರು ಎಂದು ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ರಾಮ ನವಮಿ ಮತ್ತು ಕಾರ್ತಿಕ ಪೌರ್ಣಮಿಯಂತಹ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಿದ್ದರು. ಹೀಗಾಗಿ 1877ರಲ್ಲಿ ಹಿಂದೂಗಳ ಬೇಡಿಕೆಯ ಮೇರೆಗೆ ಭೂಮಿಯ ಇನ್ನೊಂದು ಭಾಗಕ್ಕೆ ಎರಡನೇ ಪ್ರವೇಶದ್ವಾರವನ್ನು ರಚಿಸಲಾಯಿತು ಎಂಬ ವಾದವನ್ನು ಹಿಂದೂ ಮತ್ತು ಮುಸ್ಲಿಂ ಪಕ್ಷಗಳ ಸಾಕ್ಷಿಗಳು ದೃಢಪಡಿಸಿವೆ. ವಿದೇಶಿ ಪ್ರಯಾಣಿಕರು ಒದಗಿಸಿದ ಮಾಹಿತಿಯಲ್ಲಿ, ಈ ನಿದರ್ಶನಗಳಿವೆ. ಸರ್ಕಾರದ ಗೆಜೆಟ್‌ಗಳು ಸಹ ಅವುಗಳನ್ನು ದೃಢೀಕರಿಸಿವೆ.

ಭಾರತೀಯ ಪುರಾತತ್ವ ಇಲಾಖೆಯ(ಎಎಸ್ಐ) ವರದಿಯು ಮಸೀದಿಯ ಕೆಳಗೆ 12ನೇ ಶತಮಾನದ ಹಿಂದೂ ಧರ್ಮದ ಕಲಾಕೃತಿಗಳು ಇವೆ ಎಂದು ಬಹಿರಂಗಪಡಿಸಿತ್ತು. ಆ ಅವಶೇಷಗಳ ಮೇಲೆ ಮಸೀದಿಗೆ ಅಡಿಪಾಯ ಹಾಕಲಾಗಿದೆ ಎಂದು ವರದಿ ಹೇಳಿತ್ತು.

ಎಎಸ್ಐ ವರದಿಯು ಬಹಿರಂಗಪಡಿಸಿದ ಕೆಲವು ಪ್ರಮುಖ ಅಂಶಗಳನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಹಿಂದೂ ದೇವಾಲಯದ ಕಲಾಕೃತಿಗಳು ಕೆಳಗಿವೆ. ಆದರೆ ದೇವಾಲಯ ಏಕೆ ನಾಶವಾಯಿತು ಎಂದು ಸ್ಪಷ್ಟಪಡಿಸಿಲ್ಲ ಎಂದು ವರದಿ ಹೇಳುತ್ತದೆ. ಮಸೀದಿ ನಿರ್ಮಿಸುವ ಸಲುವಾಗಿ ದೇವಾಲಯವನ್ನು ಧ್ವಂಸ ಮಾಡಲಾಗಿದೆಯೆ ಎಂಬುದಕ್ಕೆ ಅದು ಉತ್ತರಿಸಲಿಲ್ಲ. 12 ನೇ ಶತಮಾನಕ್ಕೆ ಸೇರಿದ ಮಸೀದಿಯ ಕೆಳಗಿರುವ ನಿರ್ಮಾಣದ ಅವಶೇಷಗಳಡಿ 16 ನೇ ಶತಮಾನದಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಈ ನಡುವೆ 4 ಶತಕಗಳ ಅಂತರವಿದೆ ಎಂದು ವಾದ ಮಂಡನೆ ವೇಳೆ ಹೇಳಲಾಗಿತ್ತು.

ಎಎಸ್ಐ ವರದಿಯು ಆ 400 ವರ್ಷಗಳಲ್ಲಿ ನಡೆದ ಘಟನೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಸಲ್ಲಿಸಲಿಲ್ಲ. ಹಿಂದೂ ಧರ್ಮದ ಲಾಂಛನಗಳನ್ನು ಹೊಂದಿರುವ ಕಲಾಕೃತಿಗಳನ್ನು ಮಸೀದಿ ಬಳಸಿದ ಬಗ್ಗೆ ವರದಿಯು ನಿರ್ಣಾಯಕವಾಗಿರಲಿಲ್ಲ. ಮಸೀದಿ ನಿರ್ಮಾಣದಲ್ಲಿ ಕಪ್ಪು ಕಲ್ಲಿನ ಕಂಬಗಳನ್ನು ಬಳಸಲಾಗಿದೆಯಾದರೂ ಅವು ಹಿಂದಿನ ಹಿಂದೂ ದೇವಾಲಯಕ್ಕೆ ಸೇರಿದವು ಎಂದು ನಮೂದಿಸಿಲ್ಲ ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್ 1857 ಕ್ಕಿಂತ ಮೊದಲು ಹಿಂದೂಗಳು ಮಾಡಿದ ಪೂಜೆಯ ಪುರಾವೆಗಳನ್ನು ಮತ್ತು ರಾಮ ಜನ್ಮಭೂಮಿ ಸ್ಥಳವನ್ನು ಪರಿಗಣಿಸಿದ ಹಲವಾರು ನಿದರ್ಶನಗಳನ್ನು ಗಣನೆಗೆ ತೆಗೆದುಕೊಂಡು ಅದರ ತೀರ್ಪನ್ನು ನೀಡಿದೆ. ಮತ್ತೊಂದೆಡೆ, ಮುಸ್ಲಿಮರ ಭಾವನೆಗಳನ್ನು ನೋಯಿಸಲು ನ್ಯಾಯಾಲಯ ಬಯಸಲಿಲ್ಲ, ಅವರಿಗೆ ಆಗಿರುವ ಅನ್ಯಾಯವನ್ನು ಉಲ್ಲೇಖಿಸಿದೆ. ಮಸೀದಿ ಉರುಳಿಸುವಿಕೆಗೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯವು ನೀಡಿದ ಹೇಳಿಕೆಗಳು ಇದಕ್ಕೆ ಸಾಕಷ್ಟು ಪುರಾವೆಗಳಾಗಿವೆ.

ಸರ್ಕಾರಗಳು ಸುಪ್ರೀಂ ಕೋರ್ಟ್ ನಿರೀಕ್ಷಿಸಿದಂತೆ ಜಾತ್ಯತೀತತೆಗೆ ಬದ್ಧರಾಗಿ ಮತ್ತು 1991 ರ ಕಾಯಿದೆಯ ಪ್ರಕಾರ ಧಾರ್ಮಿಕ ಪೂಜಾ ಸ್ಥಳಗಳನ್ನು ಕಾಪಾಡಿದರೆ, ಮುಂದಿನ ದಶಕಗಳವರೆಗೆ ಪ್ರಜಾಪ್ರಭುತ್ವವು ಹಾಗೇ ಇರುತ್ತದೆ. ಮತ್ತು, ಮೂರೂವರೆ ದಶಕಗಳ ದ್ವೇಷದ ಭಾವನೆಗಳು ಮಸುಕಾಗುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆನಿಟ್ಟಿನಲ್ಲಿ ಯೋಚಿಸಬೇಕಿದೆ.

Intro:Body:

ಸರ್ಕಾರಗಳು ಸುಪ್ರೀಂ ಕೋರ್ಟ್ ನಿರೀಕ್ಷಿಸಿದಂತೆ ಜಾತ್ಯತೀತತೆಗೆ ಬದ್ಧರಾಗಿ ಮತ್ತು 1991 ರ ಕಾಯಿದೆಯ ಪ್ರಕಾರ ಧಾರ್ಮಿಕ ಪೂಜಾ ಸ್ಥಳಗಳನ್ನು ಕಾಪಾಡಿದರೆ, ಮುಂದಿನ ದಶಕಗಳವರೆಗೆ ಪ್ರಜಾಪ್ರಭುತ್ವವು ಹಾಗೇ ಇರುತ್ತದೆ. ಮತ್ತು, ಮೂರೂವರೆ ದಶಕಗಳ ದ್ವೇಷದ ಭಾವನೆಗಳು ಮಸುಕಾಗುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆನಿಟ್ಟಿನಲ್ಲಿ ಯೋಚಿಸಬೇಕಿದೆ…

Conclusion:
Last Updated : Nov 25, 2019, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.