ETV Bharat / bharat

ಕೊರೊನಾ ತಡೆಗೆ ‘ಇನ್​ -ಡೋರ್​ ಡಿಸ್ ​ಇನ್ಫೆಕ್ಷನ್​ ಸ್ಪ್ರೇ’ ಘಟಕ ಅಭಿವೃದ್ಧಿ

ವಿಜ್ಞಾನಿಗಳು ಚಾಲಿತ ಒಳಾಂಗಣ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಎರಡು ಘಟಕಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇವುಗಳು ಡೋರ್​ ನಾಬ್ಸ್​, ಲೈಟ್ ಸ್ವಿಚ್​ಗಳು, ಕೌಂಟರ್‌ - ಟಾಪ್​ಗಳಂತಹ ವಸ್ತುಗಳ ಮೇಲಿರುವ ವೈರಾಣು ಮತ್ತು ಬ್ಯಾಕ್ಟೀರಿಯಾಗಳನ್ನು ಈ ಘಟಕಗಳು ಸ್ವಚ್ಛಗೊಳಿಸಬಲ್ಲವು.

ಕೊರೊನಾ ತಡೆಗೆ ಇನ್​ಡೋರ್​ ಡಿಸ್​ಇನ್ಫೆಕ್ಷನ್​ ಸ್ಪ್ರೇ ಘಟಕ ಅಭಿವೃದ್ಧಿ

author img

By

Published : May 16, 2020, 6:41 PM IST

ನವದೆಹಲಿ : ದುರ್ಗಾಪುರದ ಸಿಎಸ್‌ಐಆರ್ - ಸೆಂಟ್ರಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಸಿಎಮ್‌ಇಆರ್‌ಐ) ವಿಜ್ಞಾನಿಗಳು ಚಾಲಿತ ಒಳಾಂಗಣ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಎರಡು ಘಟಕಗಳನ್ನು ಅಭಿವೃದ್ಧಿಪಡಿಸಿದ್ದಾರೆ. ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಈ ಘಟಕಗಳನ್ನು ಬಳಸಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಒಂದು ಬ್ಯಾಟರಿ ಚಾಲಿತ ಸೋಂಕು ನಿವಾರಕ ಸಿಂಪಡಿಸುವ ಯಂತ್ರ (BPDS), ಇನ್ನೊಂದು ನ್ಯೂಮ್ಯಾಟಿಕ್ ಆಪರೇಟೆಡ್ ಮೊಬೈಲ್ ಇನ್​ಡೋರ್​ ಡಿಸ್​​ಇನ್ಫೆಕ್ಟರ್​ (POMID) ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಕೋಷ್ಟಕಗಳು, ಡೋರ್​ ನಾಬ್ಸ್​, ಲೈಟ್ ಸ್ವಿಚ್​ಗಳು, ಕೌಂಟರ್‌ಟಾಪ್​, ಮೇಜು, ಫೋನ್​, ಕೀಬೋರ್ಡ್​, ಶೌಚಾಲಯಗಳು, ನಲ್ಲಿ, ಸಿಂಕ್‌ ಮತ್ತು ಕಾರ್ಡ್‌ಬೋರ್ಡ್‌ಗಳ ಮೇಲಿನ ವೈರಾಣು ಮತ್ತು ಬ್ಯಾಕ್ಟೀರಿಯಾಗಳನ್ನು ಈ ಘಟಕಗಳು ಸ್ವಚ್ಛಗೊಳಿಸಬಲ್ಲವು. ಈ ಸೋಂಕುನಿವಾರಕ ಘಟಕಗಳ ಬಳಕೆಯು ಕೊರೊನಾ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಿಪಿಡಿಎಸ್ ಮತ್ತು ಪೋಮಿಡ್ ಎರಡರಲ್ಲೂ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತ್ಯೇಕ ಶೇಖರಣಾ ಟ್ಯಾಂಕ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಪೋಮಿಡ್ ಮೊಬೈಲ್ ಒಳಾಂಗಣ ಸೋಂಕುನಿವಾರಕ ಘಟಕವನ್ನು ನಾಲ್ಕು ಚಕ್ರಗಳಲ್ಲಿ ಜೋಡಿಸಲಾದ ಉಕ್ಕಿನ ಚೌಕಟ್ಟುಗಳಿಂದ ತಯಾರಿಸಲಾಗುತ್ತದೆ. ಈ ವ್ಯವಸ್ಥೆಯು ಸಂಕೋಚಕಗಳು, ಪೈಪಿಂಗ್ ಮತ್ತು ಫಿಟ್ಟಿಂಗ್ ಮತ್ತು ಸ್ಪ್ರೇ ನಳಿಕೆಗಳನ್ನು ಒಳಗೊಂಡಿದೆ. ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಇವುಗಳನ್ನ ರೂಪಿಸಲಾಗಿದೆ. ಪೋಮಿಡ್ ಘಟಕವು ಎರಡು ಶೇಖರಣಾ ಟ್ಯಾಂಕ್‌ಗಳನ್ನು ಹೊಂದಿದ್ದು, ತಲಾ 10 ಲೀಟರ್ ಸಾಮರ್ಥ್ಯ ಹೊಂದಿದೆ.

ಬಿಪಿಡಿಎಸ್ ಘಟಕವು ಎರಡು ನಳಿಕೆಯ ತುಂತುರು ವ್ಯವಸ್ಥೆ ಮತ್ತು ವಿಸ್ತೃತ ಘಟಕವನ್ನು ಹೊಂದಿರುವ ಕಾರ್ಡ್‌ಲೆಸ್ ಯಂತ್ರವಾಗಿದೆ. ಇದು 20 ಲೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 4 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಮಯವನ್ನು ಹೊಂದಿದೆ. ವ್ಯವಸ್ಥೆಯ ಒಟ್ಟು ತೂಕ (ಖಾಲಿ ಟ್ಯಾಂಕ್) 25 ಕೆ.ಜಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.