ಚೆನ್ನೈ : ರಾಜ್ಯದಲ್ಲಿ ಕೋವಿಡ್ ಲಾಕ್‌ಡೌನ್ ಸಡಿಲಗೊಳಿಸುತ್ತಿರುವ ತಮಿಳುನಾಡು ಸರ್ಕಾರ ಇದೀಗ ನವೆಂಬರ್ 16ರಿಂದ ಶಾಲೆಗಳು (9ನೇ ತರಗತಿಯಿಂದ ಮೇಲ್ಪಟ್ಟು) ಹಾಗೂ ನ.10 ರಿಂದ ಕೊರೊನಾ ಮಾನದಂಡಗಳೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಇದಲ್ಲದೆ ಮೃಗಾಲಯಗಳು, ಮನರಂಜನಾ ಉದ್ಯಾನವನಗಳು, ವಸ್ತು ಸಂಗ್ರಹಾಲಯಗಳನ್ನು ಸಹ ನ.10ರಿಂದ, ನ.16 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗುವುದು ಹಾಗೂ ಸಾಂಸ್ಕೃತಿಕ ಕೂಟಗಳಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ 50 ವರ್ಷ ಒಳಗಿನವರಿಗೆ ಜಿಮ್‌ಗಳಿಗೆ ಬರಲು ಅವಕಾಶ, ವಿವಾಹ ಮತ್ತು ಅಂತ್ಯಕ್ರಿಯೆಗಳಲ್ಲಿ 100 ಜನರು ಪಾಲ್ಗೊಳ್ಳಬಹುದು ಎಂದು ಹೇಳಿದೆ. ಆದರೆ, ಇವೆಲ್ಲಾ ನಿಯಮಗಳು ಕಂಟೇನ್ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ 23,532 ಕೋವಿಡ್ ಕೇಸ್ ಸಕ್ರಿಯವಾಗಿವೆ.