ನವದೆಹಲಿ: ಶಿಶುವಿಹಾರದ ಮಕ್ಕಳ ಆನ್‌ಲೈನ್ ತರಗತಿಗಳಿಗೆ ಬೇಕಾಗುವ ಅಗತ್ಯ ಮೂಲಸೌಕರ್ಯಗಳು, ಪುಸ್ತಕಗಳು ಮತ್ತು ಇತರ ಉಪಕರಣಗಳನ್ನು 30 ದಿನಗಳಲ್ಲಿ ಒದಗಿಸುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಮಕ್ಕಳಿಗೆ ಕಲಿಸಲು ಅಗತ್ಯ ಸಂಖ್ಯೆಯ ಶಿಕ್ಷಕರು ಲಭ್ಯವಾಗುವಂತೆ ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ನೀಡುವ ಶಿಫಾರಸುಗಳ ಆಧಾರದ ಮೇಲೆ ಶಿಶುವಿಹಾರದ ಮಕ್ಕಳ ಆನ್‌ಲೈನ್ ತರಗತಿಗಳಿಗೆ ಬೇಕಾಗುವ ವಸ್ತುಗಳ ಪೂರೈಕೆ ಮಾಡಬೇಕು ಎಂದು ಇಂದು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
ಅಗತ್ಯವಿದ್ದರೆ ಮುಂದಿನ ವರ್ಷ ನಡೆಯುವ ಅಂತಿಮ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲು ಹೆಚ್ಚುವರಿ ತರಗತಿಗಳನ್ನು ಸಹ ನೀಡಬೇಕು ಎಂದು ಸಹ ಸೂಚಿಸಿದೆ.
ಇದನ್ನೂ ಓದಿ: ಕೋವಿಡ್ ಚಿಕಿತ್ಸೆಗೆ ಆಯುರ್ವೇದ, ಹೋಮಿಯೋಪತಿ ಔಷಧಿ ಬಳಸಬಹುದು.. ಆದರೆ ಜಾಹೀರಾತು ನೀಡುವಂತಿಲ್ಲ: ಸುಪ್ರೀಂ ಕೋರ್ಟ್
ಭಾರತದಾದ್ಯಂತ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಕೊರೊನಾ ಹರಡುತ್ತಿರುವ ಕುರಿತ ಸುಮೋಟೋ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.