ತೂತುಕುಡಿ( ತಮಿಳುನಾಡು): ತೂತುಕುಡಿಯಲ್ಲಿ ತಂದೆ ಮಗನ ಲಾಕ್ಅಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂತಕುಲಂ ಪೊಲೀಸ್ ಕಾನ್ಸ್ಟೇಬಲ್ ಮುತ್ತುರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಐವರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ ಸಿಬಿಸಿಐಡಿ ಪೊಲೀಸರು ನಂತರ ಇನ್ನೋರ್ವ ಆರೊಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿ ಕಾನ್ಸ್ಟೇಬಲ್ ಮುತ್ತುರಾಜ್ ಬಂಧನಕ್ಕೆ ಹೆದರಿ ಅರಸಂಕುಲಂನ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಸಕ್ರಿಯ ಹುಡುಕಾಟದ ಬಳಿಕ ಸಿಕ್ಕ ಆರೋಪಿ ಮುತ್ತುರಾಜ್ನನ್ನು ಟುಟಿಕೋರಿನ್ನ ಜಿಲ್ಲಾ ಸಿಬಿಸಿಐಡಿ ಕಚೇರಿಗೆ ಕರೆತರಲಾಗಿದೆ.
ಘಟನೆ ಕುರಿತು ಸಿಬಿಸಿಐಡಿ ಕಚೇರಿಯಲ್ಲಿ ಮುತ್ತುರಾಜ್ನನ್ನು ವಿಚಾರಣೆಗೊಳಪಡಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.