ETV Bharat / bharat

JNUನಲ್ಲಿ ಉಚಿತ ಆನ್​​ಲೈನ್ ಸಂಸ್ಕೃತ ಕ್ಲಾಸ್.. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ..

ಸಂಸ್ಕೃತ ಭಾಷೆ ಜನಪ್ರಿಯಗೊಳಿಸುವುದರ ಜೊತೆಗೆ ಅದರ ಕಲಿಕಾ ವಿಧಾನ, ತತ್ವಶಾಸ್ತ್ರ, ವೇದಾಂತ, ವ್ಯಾಕರಣ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಿದ್ರು.

sanskrit-class-will-be-free-in-jnu-students-participating-will-get-certificate
ಉಚಿತ ಆನ್​​ಲೈನ್ ಸಂಸ್ಕೃತ ಕ್ಲಾಸ್
author img

By

Published : Jun 9, 2020, 4:52 PM IST

ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU)ದಲ್ಲಿ ಇದೇ ಮೊದಲ ಬಾರಿಗೆ ಉಚಿತ ಆನ್‌ಲೈನ್ ಬೇಸಿಗೆ ಸಂಸ್ಕೃತ ತರಗತಿಗಳನ್ನು ನಡೆಸುತ್ತಿದೆ.

ಇದರ ಅಡಿಯಲ್ಲಿ ಒಟ್ಟು 9 ಸಂಸ್ಕೃತ ಕೋರ್ಸ್‌ಗಳು ಉಚಿತವಾಗಿ ನಡೆಯಲಿವೆ. ಇದರ ಅವಧಿ 15 ರಿಂದ 20 ಗಂಟೆಗಳಿರುತ್ತದೆ. ಈ ಕುರಿತು ಜೆಎನ್‌ಯು ಉಪಕುಲಪತಿ ಪ್ರೊ. ಎಂ ಜಗದೀಶ್‌ ಕುಮಾರ್ ಮಾತನಾಡಿ, ವಿಶ್ವಾದ್ಯಂತ ಸಂಸ್ಕೃತದ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡು ಆನ್​​ಲೈನ್​ ಕ್ಲಾಸ್​ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಚಿತ ಆನ್​​ಲೈನ್ ಸಂಸ್ಕೃತ ಕ್ಲಾಸ್..

ಸಂಸ್ಕೃತ ಭಾಷೆಯ ಜನಪ್ರಿಯತೆ ವಿದೇಶಗಳಲ್ಲಿ ಹೆಚ್ಚಾಗಿದೆ. ಇದನ್ನು ಭಾರತದಲ್ಲಿಯೂ ಜನಪ್ರಿಯಗೊಳಿಸುವ ಅವಶ್ಯಕತೆಯಿದೆ. ಹೀಗಾಗಿ ಶೀಘ್ರದಲ್ಲೇ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆನ್‌ಲೈನ್ ಪದವಿ ಕಾರ್ಯಕ್ರಮಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ಪ್ರೊ. ಜಗದೀಶ್‌ಕುಮಾರ್ ಹೇಳಿದರು. ಸಂಸ್ಕೃತ ಭಾಷೆ ಜನಪ್ರಿಯಗೊಳಿಸುವುದರ ಜೊತೆಗೆ ಅದರ ಕಲಿಕಾ ವಿಧಾನ, ತತ್ವಶಾಸ್ತ್ರ, ವೇದಾಂತ, ವ್ಯಾಕರಣ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಿದ್ರು.

ಭಾರತದಲ್ಲಿ ಈ ಭಾಷೆ ಕುಗ್ಗುತ್ತಿರುವುದರಿಂದ ಯುವಕರನ್ನು ಸಂಸ್ಕೃತದತ್ತ ಆಕರ್ಷಿಸಲು ಆನ್‌ಲೈನ್ ಸಂಸ್ಕೃತ ಬೇಸಿಗೆ ಶಾಲೆಯನ್ನು ಜೆಎನ್‌ಯು ಆಡಳಿತವು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಿದೆ. ಈ ಆನ್‌ಲೈನ್ ಬೇಸಿಗೆ ಸಂಸ್ಕೃತ ಶಾಲೆಯು ಜೂನ್ 5 ರಿಂದ ಜೂನ್ 30, 2020ರವರೆಗೆ ನಡೆಯಲಿದೆ. ಇದರಲ್ಲಿ ವಾರಕ್ಕೆ ಎರಡು ಬಾರಿ ಸಂಸ್ಕೃತ ತರಗತಿಗಳು ನಡೆಯುತ್ತವೆ. ಇನ್ನೂ 70% ಕ್ಕಿಂತ ಹೆಚ್ಚು ಹಾಜರಾತಿ ಹೊಂದಿದವರಿಗೆ ಪ್ರಮಾಣಪತ್ರ ಸಹ ನೀಡಲಾಗುವುದು ಎಂದು ಪ್ರೊ. ಎಂ ಜಗದೀಶ್‌ಕುಮಾರ್ ತಿಳಿಸಿದ್ರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.