ಮುಂಬೈ: ಕೌನ್ ಬನೇಗಾ ಕರೋಡ್ಪತಿ 11ನೇ ಆವೃತ್ತಿಯಲ್ಲಿ ರೈತನ ಮಗನೋರ್ವ ಕೋಟಿ ರೂಪಾಯಿ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಮೂಲಕ ಈ ಸಿಸನ್ನ ಮೊದಲ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ.
ಬಿಹಾರದ ಒಂದು ಚಿಕ್ಕಹಳ್ಳಿಯಲ್ಲಿ ವಾಸವಾಗಿರುವ ಸನೋಜ್ ರಾಜ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಣೆ ಮಾಡುವ ಕೌನ್ ಬನೇಗಾ ಕರೋಡ್ಪತಿಯಲ್ಲಿ ಕೇಳಲಾಗಿರುವ 1ಕೋಟಿ ರೂ ಮೌಲ್ಯದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದು, ಇದೀಗ 7ಕೋಟಿ ರೂ ಮೌಲ್ಯದ ಜಾಕ್ಪಾಟ್ ಪ್ರಶ್ನೆಗೆ ಉತ್ತರ ನೀಡಲು ಮುಂದಾಗಿದ್ದಾರೆ.
-
Sanoj Raj is our season's first Crorepati! He will attempt the jackpot question for Rs 7 Crores now. Will he succeed? Find out on #KBC, this Thursday and Friday at 9 PM @SrBachchan pic.twitter.com/eVEuX7esNb
— Sony TV (@SonyTV) September 10, 2019 " class="align-text-top noRightClick twitterSection" data="
">Sanoj Raj is our season's first Crorepati! He will attempt the jackpot question for Rs 7 Crores now. Will he succeed? Find out on #KBC, this Thursday and Friday at 9 PM @SrBachchan pic.twitter.com/eVEuX7esNb
— Sony TV (@SonyTV) September 10, 2019Sanoj Raj is our season's first Crorepati! He will attempt the jackpot question for Rs 7 Crores now. Will he succeed? Find out on #KBC, this Thursday and Friday at 9 PM @SrBachchan pic.twitter.com/eVEuX7esNb
— Sony TV (@SonyTV) September 10, 2019
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಳೆದ 7 ವರ್ಷಗಳಿಂದ ಸನೋಜ್ ಪ್ರಯತ್ನ ಪಡುತ್ತಿದ್ದರಂತೆ. ಆದರೆ ಅವರಿಗೆ ಅವಕಾಶ ಲಭ್ಯವಾಗಿರಲಿಲ್ಲ. ಈ ಸಲ ತಮಗೆ ಸಿಕ್ಕ ಅವಕಾಶವನ್ನ ಸರಿಯಾಗಿ ಸದುಪಯೋಗ ಪಡಿಸಿಕೊಂಡ ಇವರು ಕೋಟಿ ಗೆದ್ದಿದ್ದಾರೆ. ಐಎಎಸ್ ಪಾಸ್ ಆಗಿ ದೇಶದ ಸೇವೆ ಮಾಡುವ ಕನಸು ಕಾಣುತ್ತಿದ್ದ ಸನೋಜ್, ಯುಪಿಎಸ್ಸಿ ಪಿಟಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ ಎಂಜಿನಿಯರಿಂಗ್ ಪಾಸ್ ಮಾಡಿರುವ ಇವರು ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೇಂದ್ರ ಲೋಕಸೇವಾ ಪರೀಕ್ಷೆಗೆ ತಯಾರಿ ನಡೆಸುವ ಉದ್ದೇಶದಿಂದ ಕಳೆದ ಎರಡೂ ವರ್ಷಗಳ ಹಿಂದೆ ಕೆಲಸ ಬಿಟ್ಟು ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದು, ಇದೀಗ ಸೆಂಟ್ರಲ್ ಆರ್ಮ್ಸ್ ಪೊಲೀಸ್ ಪೋರ್ಸ್ನಲ್ಲಿ ಸಹಾಯಕ ಕಮಾಂಡರ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಸನೋಜ್ ರಾಜ್ ತಂದೆ ವೃತ್ತಿಯಲ್ಲಿ ರೈತನಾಗಿದ್ದು, ಬಡ ಕುಟುಂಬದಲ್ಲೇ ಜೀವನ ಸಾಗಿಸಿರುವ ಇವರು, ಜಮೀನಿನಲ್ಲಿ ಕೆಲಸ ಮಾಡಿಕೊಂಡೇ ಬೆಳೆದವರು ಎಂಬುದು ವಿಶೇಷ. ಇವರು ಕೋಟಿ ರೂಪಾಯಿ ಗೆದ್ದಿರುವ ಪ್ರೋಮೊ ಇದೀಗ ಟ್ವೀಟರ್ನಲ್ಲಿ ವೈರಲ್ ಆಗಿದೆ.