ETV Bharat / bharat

ಅಮ್ಮ ಬೈದ್ರು ಅಂತ ಮನೆ ಬಿಟ್ಟು ಹೋದ ಮಗ 5 ವರ್ಷದ ಬಳಿಕ ಪತ್ತೆ... ತಾಯಿ ಖುಷಿಗೆ ಪಾರವೇ ಇಲ್ಲ! - cases of missing children

ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಸಂಬಂಧಿಕರ ಸಹಾಯದಿಂದ ಮನೆ ಸೇರಿಸಲಾಗಿದೆ.

Runaway boy reunited with family after five years
ತಾಯಿಯೊಂದಿಗೆ ಗಲಾಟೆ: 5 ವರ್ಷದ ಬಳಿಕ ಮನೆ ಸೇರಿದ ಬಾಲಕ
author img

By

Published : Mar 12, 2020, 3:33 PM IST

ಮಹಾರಾಷ್ಟ್ರ (ಥಾಣೆ): ತನ್ನ ತಾಯಿಯೊಂದಿಗೆ ಜಗವಾಡಿಕೊಂಡು 2015ರಲ್ಲಿ ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ದೆಹಲಿಯಲ್ಲಿ ಪತ್ತೆ ಹಚ್ಚಿ, ಪೊಲೀಸರು ಆತನ ಕುಟುಂಬಕ್ಕೆ ಸೇರಿಸಿದ್ದಾರೆ.

ಇಲ್ಲಿನ ಉಲ್ಲಾಸ್​ ನಗರದಲ್ಲಿ ಆತನ ಕುಟಂಬ ವಾಸವಿತ್ತು. 2015ರ ಸೆಪ್ಟೆಂಬರ್​ 25ರಂದು ಮಗ ಮನೆಯಿಂದ ಹೊರಟು ಹೋದ ನಂತರ ಬಾಲಕನ ಪೋಷಕರು ದೂರು ದಾಖಲಿಸಿದ್ದರು.

ಇತ್ತೀಚೆಗೆ ಮಕ್ಕಳು ಕಾಣೆಯಾದ ಪ್ರಕರಣ ಪತ್ತೆ ಹಚ್ಚುವಾಗ ಬಾಲಕ ದೆಹಲಿಯಲ್ಲಿರುವ ಸುಳಿವು ಸಿಕ್ಕಿತು ಎಂದು ಉಲ್ಲಾಸನಗರದ ಅಪರಾಧ ವಿಭಾಗದ ಇನ್ಸ್​​ಪೆಕ್ಟರ್​​​​​​ ಮಹೇಶ್​​ ತಾರ್ದೆ ಹೇಳಿದರು.

ಬಾಲಕನನ್ನು ದೆಹಲಿಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಬಳಿಕ ಆತನ ಸಂಬಂಧಿಕರ ನೆರವಿನೊಂದಿಗೆ ಇಲ್ಲಿಗೆ ಕರೆತರಲಾಗಿದೆ. ಮನೆ ಬಿಟ್ಟು ಬರಲು ಕಾರಣ ಕೇಳಿದ್ದಕ್ಕೆ ತನ್ನ ತಾಯಿಯೊಂದಿಗೆ ಜಗಳವಾಡಿಕೊಂಡಿದ್ದೆ ಎಂದು ತಿಳಿಸಿದ್ದಾನೆ.

ಮನೆ ಬಿಟ್ಟು ಹೋದ ನಂತರ ಮುಂಬೈನ ಬೈಕುಲ್ಲಾ ಪ್ರದೇಶದ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡಿದೆ. ನಂತರ ಗೋವಾಕ್ಕೆ ಹೋದೆ. ಮತ್ತೆ ಅಲ್ಲಿಂದ ದೆಹಲಿ ಸೇರಿದೆ. ಇಲ್ಲಿ ಅಡುಗೆ ಕೆಲವವನ್ನೂ ಮಾಡುತ್ತಿದ್ದೆ ಎಂದು ಬಾಲಕ ಪೋಲಿಸರಿಗೆ ತಿಳಿಸಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.