ಇಡುಕ್ಕಿ:ಮಳೆಯಿಂದ ರಸ್ತೆ ಹಾಳಾದ ಕಾರಣ ರೋಗಿಯನ್ನು ಹೆಗಲ ಮೇಲೆ ಹೊತ್ತು ಸುಮಾರು 25 ಕಿ.ಮೀ. ನಡೆದು ಆಸ್ಪತ್ರೆಗೆ ಸೇರಿಸಿರುವ ದಾರುಣ ಘಟನೆ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಎಡಮಲಕುಕ್ಡಿ ಯಲ್ಲಿ ನಡೆದಿದೆ.
ಅಂಡವಾಂಕುಡಿ ನಿವಾಸಿಯಾದ ನಟರಾಜನ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಊರಿನಲ್ಲಿ ರಸ್ತೆ ಸರಿಯಿಲ್ಲದ ಕಾರಣ ಯಾವುದೇ ವಾಹನ ಅಲ್ಲಿಗೆ ಬರಲಾಗಿಲ್ಲ. ಈ ಹಿನ್ನೆಲೆ ಸುಮಾರು 50 ಜನರು ಸೇರಿ ಬಟ್ಟೆಯಿಂದ ತಯಾರಿಸಿದ ಸ್ಟ್ರೆಚರ್ ನಲ್ಲಿ ಕಾಡಿನ ಮಾರ್ಗದ ಮೂಲಕ ಅವರನ್ನ ಸುಮಾರು 25 ಕಿ.ಮೀ. ದೂರ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.