ದೆಹಲಿ: ಸದ್ಯ ದೇಶದ ಅರ್ಥಿಕ ಸ್ಥಿತಿಗಳನ್ನು ಅವಲೋಕಿಸಿರುವ ಆರ್‌ಬಿಐ, ರೆಪೋ ದರ 5.1 ಬೇಸಿಸ್ ಪಾಯಿಂಟ್‌ಗಳಿಂದ 4.4% ಕ್ಕೆ ಇಳಿಸಿದ್ದು, ರಿವರ್ಸ್ ರೆಪೋ ದರವನ್ನು 90 ಬೇಸಿಸ್ ಪಾಯಿಂಟ್‌ಗಳಿಂದ 4% ಕ್ಕೆ ಇಳಿಸಿದೆ. ಜೊತೆಗೆ ಇವಿಎಂ ಕಟ್ಟುವವರು, ವೈಯಕ್ತಿಕ, ಗೃಹ, ವಾಹನ ಸಾಲ ಕಟ್ಟುವವರಿಗೆ 3 ತಿಂಗಳ ಕಾಲ ಬಿಗ್ ರಿಲೀಫ್ ನೀಡಿ ಮಹತ್ವದ ನಿರ್ಧಾರ ಪ್ರಕಟಿಸಿದೆ.
ದೆಹಲಿಯ ಆರ್‌ಬಿಐ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಮಹತ್ವದ ವಿಚಾರ ತಿಳಿಸಿದರು.
ರೆಪೋ ಮತ್ತು ರಿವರ್ಸ್ ರೆಪೋ ದರ ಕಡಿತ ಕಾರಣ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿದರ ಕಡಿತ ಮಾಡಲಾಗಿದ್ದು, ರಿಸರ್ವ್ ಬ್ಯಾಂಕ್ ಸದ್ಯದ ಅರ್ಥಿಕ ಸ್ಥಿತಿಗಳ ಕುರಿತು ಗಮನಹರಿಸುತ್ತಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
ಕೊರೊನಾ ವೈರಸ್ ಕುರಿತು ಮಾತನಾಡಿದ ಅವರು, ಕೋವಿಡ್-19 ಪರಿಣಾಮ ಅನೇಕ ರೀತಿಯಲ್ಲಿ ನಷ್ಟ ಉಂಟಾಗಿದ್ದು, ಹೀಗಾಗಿ ನಾವು ಮಹತ್ವದ ಕೆಲ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಈಗಾಗಲೇ ನಾವು ಸಣ್ಣ ಉದ್ಯಮಗಳ ನಷ್ಟದ ಕುರಿತು ಗಮನ ಹರಿಸುತ್ತಿದ್ದೇವೆ. ಕೊರೊನಾ ವೈರಸ್ ಕೂಡ ಅರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.