ನವದೆಹಲಿ: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಆರು ಗಂಟೆಗೆ ಮಾತನಾಡುತ್ತಿದ್ದು, ಇದರ ಬೆನ್ನಲ್ಲೇ ರಾಹುಲ್ ಗಾಂಧಿ ನಮೋ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಡಿಯರ್ ಪಿಎಂ, ನಿಮ್ಮ 6 ಗಂಟೆ ಭಾಷಣದಲ್ಲಿ ದಯವಿಟ್ಟು ದೇಶದ ಜನತೆಗೆ ಈ ಮಾಹಿತಿ ತಿಳಿಸಿ ಎಂದಿರುವ ರಾಗಾ, ಭಾರತದ ಭೂಪ್ರದೇಶದಿಂದ ಚೀನಾ ಯಾವಾಗ ಹೊರಹೋಗುತ್ತದೆ ಎಂಬುವುದನ್ನ ದಯಮಾಡಿ ತಿಳಿಸಿ ಎಂದಿದ್ದಾರೆ.
-
Dear PM,
— Rahul Gandhi (@RahulGandhi) October 20, 2020 " class="align-text-top noRightClick twitterSection" data="
In your 6pm address, please tell the nation the date by which you will throw the Chinese out of Indian territory.
Thank you.
">Dear PM,
— Rahul Gandhi (@RahulGandhi) October 20, 2020
In your 6pm address, please tell the nation the date by which you will throw the Chinese out of Indian territory.
Thank you.Dear PM,
— Rahul Gandhi (@RahulGandhi) October 20, 2020
In your 6pm address, please tell the nation the date by which you will throw the Chinese out of Indian territory.
Thank you.
ಮಧ್ಯಾಹ್ನ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅವರ ಭಾಷಣದ ಬಗ್ಗೆ ದೇಶದ ಜನರಲ್ಲಿ ಹೆಚ್ಚಿನ ಕುತೂಹಲ ಉಂಟಾಗಿದೆ.
ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಗಡಿ ಪ್ರದೇಶದ ವಿಚಾರವಾಗಿ ವೈಮನಸ್ಸು ಉಂಟಾಗಿದ್ದು, ರಾಹುಲ್ ಗಾಂಧಿ ಈ ವಿಚಾರವಾಗಿ ಅನೇಕ ಸಲ ನಮೋ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.