ನವದೆಹಲಿ: ಕೋವಿಡ್-19 ಲಾಕ್‌ಡೌನ್‌ನಿಂದಾಗಿರುವ ಸಮಸ್ಯೆಗಳ ಬಗ್ಗೆ ಅರಿಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಟ್ರಾಕ್ಸಿ ಚಾಲಕನೊಂದಿಗೆ ದೆಹಲಿಯಲ್ಲಿಂದು ಸಂವಾದ ನಡೆಸಿದ್ದಾರೆ.
ನಾವು ಉಬರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಖರ್ಚುಗಳನ್ನು ತಗ್ಗಿಸುವ ಸಲುವಾಗಿ ಉಬರ್ ಶೇಕಡಾ 35 ರಷ್ಟು ಉದ್ಯೋಗವನ್ನು ಕಡಿತ ಮಾಡಿದೆ ಎಂದು ಚಾಲಕ ಪರಮಾನಂದ್, ರಾಹುಲ್ ಗಾಂಧಿಗೆ ವಿವವರಿಸಿದ್ದಾರೆ.
ಆಟೋ ಮೊಬೈಲ್ ಕಂಪನಿಗಳಿಗೂ ಕೊರೊನಾ ಮಹಾಮಾರಿ ಬಿಸಿ ತಟ್ಟಿದ್ದು, ಟ್ಯಾಕ್ಸಿ ಚಾಲಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎನ್ನಲಾಗಿದೆ.
ವೈನಾಡು ಸಂಸದರೂ ಆಗಿರುವ ರಾಹುಲ್ ಗಾಂಧಿ ಕಳೆದ ಕೆಲ ದಿನಗಳ ಹಿಂದಷ್ಟೇ ದೆಹಲಿಯ ಸುಖದೇವ್ ವಿಹಾರ್ ಮೇಲ್ಸೇತುವೆ ಬಳಿ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಆಲಿಸಿದ್ದರು. ವಲಸೆ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಿದ್ದ ಕುರಿತ ಸಾಕ್ಷ್ಯಚಿತ್ರವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.
ಸಂಕಷ್ಟದಲ್ಲಿರುವ 13 ಕೋಟಿ ಬಡ ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದರು.