ETV Bharat / bharat

ಪಂಜಾಬ್ ಕಳ್ಳಭಟ್ಟಿ​ ದುರಂತ: ಪಕ್ಷಾತೀತ ತನಿಖೆಗೆ ಸಂಸದ ಸನ್ನಿ ಡಿಯೋಲ್ ಪತ್ರ

ಕಳ್ಳಭಟ್ಟಿ ದುರಂತದ ತನಿಖೆಯನ್ನು ಪಕ್ಷಾತೀತವಾಗಿ ನಡೆಸಬೇಕೆಂದು ಹಾಗೂ ನ್ಯಾಯಾಂಗೀಯ ತನಿಖೆಗೆ ಪ್ರಕರಣವನ್ನು ವಹಿಸಿರುವುದು ಕಣ್ಣೊರೆಸುವ ತಂತ್ರ ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

MP Sunny Deol
ಸಂಸದ ಸನ್ನಿ ಡಿಯೋಲ್
author img

By

Published : Aug 4, 2020, 1:11 PM IST

ನವದೆಹಲಿ: ಬಿಜೆಪಿ ಸಂಸದ ಹಾಗೂ ಬಾಲಿವುಡ್ ನಟ ಸನ್ನಿ ಡಿಯೋಲ್​ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಕಳ್ಳಭಟ್ಟಿ ದುರಂತದ ತನಿಖೆಯನ್ನು ಪಕ್ಷಾತೀತವಾಗಿ ನಡೆಸಬೇಕೆಂದು, ನ್ಯಾಯಾಂಗೀಯ ತನಿಖೆಗೆ ಪ್ರಕರಣವನ್ನು ವಹಿಸಿರುವುದು ಕಣ್ಣೊರೆಸುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಲ್ಲಿ ನೂರಕ್ಕೂ ಹೆಚ್ಚು ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದು, ದೇಶದ ಎಲ್ಲರೂ ದುಃಖಿತರಾಗಿದ್ದಾರೆ ಎಂದು ಸನ್ನಿ ಡಿಯೋಲ್​ ಸಿಎಂ ಅಮರೀಂದರ್ ಸಿಂಗ್​ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್​ ಕಳ್ಳಭಟ್ಟಿ​ ದುರಂತ: 108ಕ್ಕೇರಿದ ಸಾವಿನ ಸಂಖ್ಯೆ, 37 ಆರೋಪಿಗಳು ಪೊಲೀಸರ​ ವಶಕ್ಕೆ

ಗುರುದಾಸ್​ಪುರ ಸಂಸದ ಸನ್ನಿ ಡಿಯೋಲ್​ ಅವರ ಲೋಕಸಭಾ ಕ್ಷೇತ್ರವಾಗಿದ್ದು, ಇಲ್ಲಿನ ಬಟಾಲಾ ಕಳ್ಳಭಟ್ಟಿ ದುರಂತದಿಂದ ಅತಿ ಹೆಚ್ಚು ಹಾನಿಗೊಳಾದ ಜಿಲ್ಲೆಯಾಗಿದೆ.

ಇದರಿಂದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್​ಗೆ ಸನ್ನಿ ಡಿಯೋಲ್ ಪತ್ರ ಬರೆದಿದ್ದು, ಈ ಮಾಫಿಯಾದಲ್ಲಿ ಕೆಲವು ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ಕೆಲವು ರಾಜಕಾರಣಿಗಳು ಭಾಗಿಯಾಗಿದ್ದಾರೆ. ನಕಲಿ ಮದ್ಯ ವ್ಯಾಪಾರದಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಡಿಯೋಲ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈಗಾಗಲೇ ಪಂಜಾಬ್ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಅದೇಶಿಸಿದ್ದು, ಇದು ಕಣ್ಣೊರೆಸುವ ತಂತ್ರ ಎಂದು ಸನ್ನಿ ಡಿಯೋಲ್​ ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.