ETV Bharat / bharat

ಪುಣೆಯಲ್ಲಿ ಪಬ್​ಜಿ ಆಟಕ್ಕೆ ಯುವಕ ಬಲಿ...ಆಟದಲ್ಲಿದ್ದಂತೆ ವರ್ತಿಸುತ್ತಿದ್ದ ಎಂದ ಪೋಷಕರು - lost his life because of PUBG.

ಪುಣೆಯ ಪಿಂಪ್ರಿ-ಚಿಂಚವಾಡದಲ್ಲಿ ಜನವರಿ 16ರಂದು ಪಬ್​ಜಿ ಆಡುತ್ತಾ 27 ವರ್ಷದ ಯುವಕ ಹರ್ಷಲ್​ ಮೆಮನೆ ಎಂಬಾತ ಜೀವ ಕಳೆದುಕೊಂಡಿದ್ದಾನೆ.

PUBG takes another life, Pune youth died while playing it in 'real life'
ಪುಣೆಯಲ್ಲಿ ಪಬ್​ಜಿ ಆಟಕ್ಕೆ ಯುವಕ ಬಲಿ
author img

By

Published : Jan 20, 2020, 2:59 PM IST

ಪುಣೆ (ಮಹಾರಾಷ್ಟ್ರ): ಇಲ್ಲಿನ ಪಿಂಪ್ರಿ-ಚಿಂಚವಾಡದಲ್ಲಿ ಜನವರಿ 16ರಂದು ಪಬ್​ಜಿ ಆಡುತ್ತಾ 27 ವರ್ಷದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಹರ್ಷಲ್​ ಮೆಮನೆ ಮೃತ ಯುವಕ.

ಯುವಕ ಮನೆಯಲ್ಲಿ ಪಬ್​ಜಿ ಆಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಪಾರ್ಶ್ವವಾಯುವಿಗೊಳಗಾಗಿ ಒಳಗಾಗಿ ಕುಸಿದು ಬಿದ್ದ. ತಕ್ಷಣವೇ ಪೋಷಕರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಯುವಕ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಕೊನೆಯುಸಿರೆಳೆದ. ಕುಟುಂಬದ ಸದಸ್ಯರು ಆಸ್ಪ್ರತ್ರೆಗೆ ಕರೆತಂದ ಸಂದರ್ಭದಲ್ಲಿಯೇ ಆತ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ.

ಮೊಬೈಲ್​ ಇಲ್ಲದೆ ಹರ್ಷಲ್​ ಅರೆ ಕ್ಷಣವೂ ಇರುತ್ತಿರಲಿಲ್ಲ. ಬಿಡುವಿಲ್ಲದೆ, ಪಬ್​ಜಿ ಆಡುತ್ತಿದ್ದ. ಆ ಮಟ್ಟಿಗೆ ಗೀಳು ಹಚ್ಚಿಸಿಕೊಂಡಿದ್ದ. ಪಬ್​ಜಿ ಆಡುತ್ತಲೇ ತನ್ನ ಕೈಗಳಿಂದ ಶೂಟಿಂಗ್​ ಮಾಡುತ್ತಿದ್ದ. ಆಟದಲ್ಲಿದ್ದಂತೆ ಶತ್ರುವನ್ನು ಹುಡುಕುತ್ತಾ ಮನೆಯಲ್ಲಿ ತಿರುಗುತ್ತಿದ್ದ. ಮಂಡಿಯ ಮೇಲೆ ಕುಳಿತು ಗನ್​ ಹಿಡಿದಂತೆ ಶೂಟ್​ ಮಾಡುತ್ತಿದ್ದ ಎಂದು ಕುಟುಂಬದ ಸದಸ್ಯರು ಹೇಳಿದರು.

ಪಬ್​ಜಿ ಆಟಕ್ಕೆ ಯುವಕ ಬಲಿ

ಜನವರಿ 16ರಂದು ಸಹ ಅದೇ ರೀತಿ ಮಾಡುತ್ತಿದ್ದ. ಬಳಿಕ ಇದ್ದಕ್ಕಿದ್ದಂತೆ ಕುಸಿದು ಬಿದ್ದ. ಅದನ್ನು ಕಂಡು ನಾವು ಬಹುಶಃ ದಣಿದಿರಬಹುದು. ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದು ಭಾವಿಸಿದೆವು. ಆದರೆ ಆತನಲ್ಲಿ ಯಾವುದೇ ಚಲನವಲನ ಕಾಣದ ಕಾರಣ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕುಟುಂಬದವರು ಹೇಳಿದರು.

ವೈದ್ಯರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆತ ಕೋಮಾದಲ್ಲಿದ್ದ. ಸಿ.ಟಿ.ಸ್ಕ್ಯಾನ್ ಮತ್ತು ಶಸ್ತ್ರಚಿಕಿತ್ಸೆ ಮಾಡಿದೆವು. ಆದರೂ ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದರು.

Intro:Body:

Pune (maharashtra) : Harshal Memane, a 27 year old guy from Pimpri-Chinchwad (Pune) lost his life because of PUBG. On 16th of January, he was playing pubg at his home, and suddenly he fell on ground because of stroke. He was taken to Hospital immidietly, but lost his life during the treatment.

Byte - Dr. Mahesh Kudale

"He was unconcious when his family members brought him to hospital. His Family members told that he was completely addicted to phone, especiallty pubg. He was so into the game, that he used to do the 'shooting' action with his hands, in real life as well. He used to roam around the house, looking for 'Enemy'. He used to 'perform' the activities of game, in real life, (like sitting on Knees, holding the gun and shooting).

That day as well, he was doing the same, and suddenly collapsed. The family members thought that hes tired and resting a bit. But as they saw no movement they suddenly took him to nearest clinic, from which he was shifted to our Hospital.

When we checked him, he was in Coma. We did the CT scan and performed a surgery as well. But, unfortunetly, we couldn't save him."

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.