ETV Bharat / bharat

ಲಾಕ್​ಡೌನ್​ ಕ್ರಮ ಐಟಿ ಉದ್ಯಮದ ಮೇಲೆ ಪ್ರಭಾವ ಬೀರುತ್ತಾ... ವರ್ಕ್​ ಫ್ರಂ ಹೋಂ ವ್ಯವಸ್ಥೆ ಅನಿವಾರ್ಯವೇ? - ಸ್ಟಾರ್ಟ್ಅಪ್‌ಗಳ ಮೇಲೆ ದೀರ್ಘಕಾಲದ ಲಾಕ್‌ಡೌನ್‌ನ ಪ್ರಭಾವ

ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ದೀರ್ಘ ಕಾಲದವರೆಗೆ ಲಾಕ್‌ಡೌನ್ ಮಾಡುವುದು ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಹೇಳಿರುವ ನಾಸ್ಕಾಂ (NASSCOM) ಮಾಜಿ ಅಧ್ಯಕ್ಷ ಆರ್​​. ಚಂದ್ರಶೇಖರ್, ಹೊಸ ಮಾರ್ಗಗಳನ್ನು ತೆರೆಯುವುದರಿಂದ ಮತ್ತು ಐಟಿ ಸಂಸ್ಥೆಗಳಿಂದ ಹೂಡಿಕೆಗಳನ್ನು ಉಳಿಸುವುದರಿಂದ ದೀರ್ಘಾವಧಿಯಲ್ಲಿ ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯಿಂದ ಸಕಾರಾತ್ಮಕ ಬೆಳವಣಿಗೆಯಾಗಬಹುದು ಎಂದು ಹೇಳಿದ್ದಾರೆ.

ಲಾಕ್​ಡೌನ್​ ಕ್ರಮ ಐಟಿ ಉದ್ಯಮದ ಮೇಲೆ ಪ್ರಭಾವ ಬೀರುತ್ತಾ

author img

By

Published : Apr 12, 2020, 9:24 PM IST

Updated : Apr 12, 2020, 11:43 PM IST

ಹೈದರಾಬಾದ್: ಲಾಕ್​ಡೌನ್​ ಕ್ರಮದಿಂದ ಭಾರತೀಯ ಐಟಿ ಉದ್ಯಮದಲ್ಲಿ ಉದ್ಯೋಗ ಕಡಿತವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ನಾಸ್ಕಾಂ (NASSCOM)ನ ಮಾಜಿ ಅಧ್ಯಕ್ಷ ಆರ್.ಚಂದ್ರಶೇಖರ್​ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮನೆಯಿಂದಲೇ ಕೆಲಸ ಮಾಡುವ ಪ್ರಕ್ರಿಯೆ ಸಕಾರಾತ್ಮಕ ಬೆಳವಣಿಗೆಯಾಗಬಹುದು. ಇದು ಐಟಿ ಸಂಸ್ಥೆಗಳ ಅಭಿವೃದ್ಧಿಗೆ ಪೂರಕ ಎಂದಿದ್ದಾರೆ. ಪ್ರಸ್ತುತ ಸನ್ನಿವೇಶವು ಹದಗೆಟ್ಟರೆ ಬಂಡವಾಳಶಾಹಿಗಳು ಹಣ ಹೂಡಿದ ಸ್ಟಾರ್ಟ್​ಅಪ್​ ಕಂಪನಿಗಳು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದೊಡ್ಡ ಕಂಪನಿಗಳು ವಾಸ್ತವವಾಗಿ ಎರಡು ಕಾರಣಗಳಿಗಾಗಿ ಉದ್ಯೋಗಗಳನ್ನು ಕಡಿತಗೊಳಿಸುತ್ತಿಲ್ಲ. ಒಂದು ಅವರು ತಮ್ಮ ಉದ್ಯೋಗಿಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಮತ್ತು ಅವರಿಗೆ ಸಂಬಳ ನೀಡಲು ಹಣವಿದೆ. ಸಾಮಾನ್ಯ ಹಾಗೂ ಕಾಯಂ ನೌಕರರು ಹೋಗುವುದನ್ನು ಕೂಡ ಅವರು ಬಯಸುವುದಿಲ್ಲ. ಆದರೂ ಇದು ಎಲ್ಲಿಯವರೆಗೆ? ಎರಡು ತಿಂಗಳು ಅಥವಾ ಮೂರು ತಿಂಗಳು ನೋಡಿಕೊಳ್ಳಬಹುದು. ಇದಾದ ನಂತರ ಅವರು ತೀವ್ರ ಒತ್ತಡಕ್ಕೆ ಸಿಲುಕಬೇಕಾಗುತ್ತದೆ ಎಂದು ಚಂದ್ರಶೇಖರ್​ ಹೇಳಿದ್ದಾರೆ.

ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳುತ್ತಿವೆ. ಈ ವ್ಯವಸ್ಥೆ ಕೆಲವು ಸಮಯದವರೆಗೆ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದರೆ, ದೀರ್ಘಾವಧಿಯಲ್ಲಿ ಈ ವ್ಯವಸ್ಥೆ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುತ್ತದೆ. ಇನ್ನು ಮನೆಯಿಂದಲೇ ಕೆಲಸ ಮಾಡುವುದರಿಂದ ನೌಕರರ ಉತ್ಪಾದಕತೆ, ಲಾಜಿಸ್ಟಿಕ್ಸ್ ವೆಚ್ಚ ಮತ್ತು ಕಚೇರಿ ಸ್ಥಳದ ವಿಷಯದಲ್ಲಿ ಉಳಿತಾಯಕ್ಕೆ ಕಾರಣವಾಗುತ್ತದೆ.

ಭಾರತೀಯ ಐಟಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಕ್ಲೈಂಟ್ ಕಂಪನಿಗಳು ಸಹ ಇದೇ ರೀತಿಯ ವ್ಯವಸ್ಥೆಗೆ ಒಳಗಾಗುತ್ತಿವೆ. ಮನೆಯಿಂದ ಕೆಲಸ ಮಾಡುವ ಪ್ರಕ್ರಿಯೆಗೆ ಆಕ್ಷೇಪಿಸುವುದಿಲ್ಲ ಎಂದು ತಮ್ಮ ಅನಿಸಿಕೆ ತಿಳಿಸಿವೆ. ಅಲ್ಲದೆ, ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಕೂಡ ಅಷ್ಟು ಸುಲಭದ ಮಾತಲ್ಲ. ಈ ಕೊರೊನಾ ಸೋಂಕು ನಮ್ಮನ್ನು ವೇಗವಾಗಿ ಬದಲಾಗುವಂತೆ ಒತ್ತಾಯಿಸುತ್ತಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಸ್ಟಾರ್ಟ್ಅಪ್‌ಗಳ ಮೇಲೆ ದೀರ್ಘಕಾಲದ ಲಾಕ್‌ಡೌನ್‌ನ ಪ್ರಭಾವದ ಕುರಿತು ಹೇಳಿದ ಅವರು, ಉದಯೋನ್ಮುಖ ಉದ್ಯಮಗಳಿಗೆ ಇದು ಒಂದು ದೊಡ್ಡ ಸವಾಲಾಗಿರುತ್ತದೆ. ಅವರು ಪಡೆಯುವ ಹೂಡಿಕೆಗಳು ಅವರ ಆಲೋಚನೆಗಳು ಮತ್ತು ಭವಿಷ್ಯದ ಆದಾಯವನ್ನು ಆಧರಿಸಿವೆ. ಪ್ರಸ್ತುತ ಪರಿಸ್ಥಿತಿಯು ಅವರ ಪ್ರಗತಿಯನ್ನು ಸಂಕೋಲೆಗೊಳಿಸಬಹುದು. ಸ್ಟಾರ್ಟ್​ ಆಪ್​ ಕಂಪನಿಗಳು ಈಗ ಉದ್ಯೋಗಿಗಳಿಗೆ ಹಣ ನೀಡಲು ಎಲ್ಲಿ ಪಡೆಯುತ್ತಾರೆ? ವೆಂಚರ್ ಕ್ಯಾಪಿಟಲ್ ಹೂಡಿಕೆದಾರರು ಹಣವನ್ನು ಪಾವತಿಸುವುದಿಲ್ಲ ಅಥವಾ ವೇತನ ಪಾವತಿಸಲು ತಮ್ಮ ಹಣವನ್ನು ಹೂಡಿಕೆ ಕೂಡ ಮಾಡುವುದಿಲ್ಲ. ಯಾಕೆಂದರೆ ಅವರದು ಚಾರಿಟಿ ವ್ಯವಹಾರವಾಗಿರುವುದಿಲ್ಲ. ನೌಕರರಿಗೆ ವೇತನ ನೀಡದಿದ್ದರೆ ತುಂಬಾ ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಯೋಜನೆ ಒಂದು ಟಾಸ್ಕ್​ ಆಗಿ ಪರಿಣಮಿಸುತ್ತದೆ ಎಂದಿದ್ದಾರೆ.

ಮಧ್ಯಮ ಗಾತ್ರದ ಐಟಿ ಸಂಸ್ಥೆಯ ಸಂಸ್ಥಾಪಕರೊಬ್ಬರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಜಗತ್ತಿನಾದ್ಯಂತ ಪ್ರಸ್ತುತ ಪರಿಸ್ಥಿತಿ ಇನ್ನೂ ಕೆಲವು ತಿಂಗಳುಗಳವರೆಗೆ ಮುಂದುವರಿದರೆ ದೊಡ್ಡ ಸಂಸ್ಥೆಗಳಿಗೂ ಸಹ ಐಟಿ ಉದ್ಯಮದಲ್ಲಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದಿದ್ದಾರೆ.

ಪರಿಸ್ಥಿತಿ ಇನ್ನೂ ವಿಕಸನಗೊಳ್ಳುತ್ತಿರುವುದರಿಂದ ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಚಿತ್ರಣ ಹೊರ ಬಂದಿಲ್ಲ. ಇಡೀ ಜಗತ್ತು ಒತ್ತಡದಲ್ಲಿರುವುದರಿಂದ ಐಟಿ ಉದ್ಯಮಕ್ಕೆ ಬೇಡಿಕೆ ಕುಗ್ಗುತ್ತದೆ. ಇವೆಲ್ಲವೂ ಒಂದು ರೀತಿಯ ಒತ್ತಡದಲ್ಲಿವೆ. ಆದ್ದರಿಂದ ಬೇಡಿಕೆಯ ಕುಗ್ಗುವಿಕೆ ಇರುತ್ತದೆ. ಉದ್ಯಮದ ಕಠಿಣ ಸಮಯವನ್ನು ಇದು ಸೂಚಿಸುತ್ತದೆ ಎಂದು ನಾಸ್ಕಾಂನ ಮತ್ತೊಬ್ಬ ಮಾಜಿ ಅಧ್ಯಕ್ಷ ಬಿ.ವಿ.ಆರ್.ಮೋಹನ್ ರೆಡ್ಡಿ ವಿವರಣೆ ನೀಡಿದ್ದಾರೆ.

Last Updated : Apr 12, 2020, 11:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.