ETV Bharat / bharat

ಪ್ರಣಬ್ ಮುಖರ್ಜಿಗೆ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ... ವೆಂಟಿಲೇಟರ್​ನಲ್ಲಿ ಮಾಜಿ ರಾಷ್ಟ್ರಪತಿ!

author img

By

Published : Aug 11, 2020, 2:20 AM IST

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ನಡೆಸಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಅವರನ್ನ ವೆಂಟಿಲೇಟರ್​​ನಲ್ಲಿ ಇಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Pranab Mukherjee
Pranab Mukherjee

ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿಯವರಿಗೆ ನಡೆಸಿದ ಮೆದುಳಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಅವರನ್ನ ವೆಂಟಿಲೇಟರ್​ ಸಹಾಯದ ಮೇಲೆ ಇಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

84 ವರ್ಷದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ಇಲ್ಲಿನ ಸೇನಾ ಆಸ್ಪತ್ರೆಯಲ್ಲಿ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ವೆಂಟಿಲೇಟರ್​​ನಲ್ಲಿಡಲಾಗಿದೆ. ಮೆದುಳಿನಲ್ಲಿ ಉಂಟಾಗಿದ್ದ ಗೆಡ್ಡೆಯನ್ನು ತೆಗೆಯಲು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

  • Former President Pranab Mukherjee (in file photo) is presently on ventilator support at Army's Research and Referral (R&R) Hospital in Delhi. He underwent brain surgery: Sources

    The former President yesterday tweeted that he tested positive for COVID-19. pic.twitter.com/qGnK9Gnlgq

    — ANI (@ANI) August 10, 2020 " class="align-text-top noRightClick twitterSection" data=" ">

ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ಕೊರೊನಾ ವೈರಸ್​​ ಸೋಂಕು ದೃಢಪಟ್ಟಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರು ಸ್ವತಃ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದರು.

ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರ ಮೇಲೆ ಅಲ್ಲಿನ ನುರಿತ ತಜ್ಞ ವೈದ್ಯರ ತಂಡ ನಿಗಾ ಇಟ್ಟಿದೆ. ಮಿದುಳಿನಲ್ಲಿ ಹೆಪ್ಪುಗಟ್ಟಿದ ರಕ್ತ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.