ETV Bharat / bharat

ವಿಕಾಸ್ ದುಬೆಯ ಮೇಲೆ ದೂರು ದಾಖಲು, ನಾಪತ್ತೆಯಾಗಿದ್ದ ರಾಹುಲ್​ ತಿವಾರಿ ಪತ್ತೆ - ಪೊಲೀಸ್​​ ಎನ್​ಕೌಂಟರ್​

ಪೊಲೀಸ್ ಮಾಹಿತಿದಾರನೂ ಆಗಿದ್ದ ರಾಹುಲ್ ತಿವಾರಿ, ವಿಕಾಸ್ ದುಬೆ ವಿರುದ್ಧ ಆಸ್ತಿ ಕಬಳಿಕೆ ಆರೋಪ ಹೊರಿಸಿ ಚೌಬೇಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ.

rahul tiwari
ರಾಹುಲ್​ ತಿವಾರಿ
author img

By

Published : Jul 15, 2020, 3:43 PM IST

ಲಖನೌ (ಉತ್ತರ ಪ್ರದೇಶ): ಎನ್​ಕೌಂಟರ್​​ನಲ್ಲಿ ಹತ್ಯೆಯಾದ ಗ್ಯಾಂಗ್​ಸ್ಟರ್ ವಿಕಾಸ್​ ದುಬೆ ವಿರುದ್ಧ ಎಫ್​ಐಆರ್​ ದಾಖಲಿಸಲು ಧೈರ್ಯ ತೋರಿದ್ದ ಪೊಲೀಸ್ ಮಾಹಿತಿದಾರ ರಾಹುಲ್ ತಿವಾರಿ ಪತ್ತೆಯಾಗಿದ್ದಾನೆ.

ಸುಮಾರು 14 ದಿನಗಳಿಂದ ಈತ ತನ್ನ ಕುಟುಂಬದೊಂದಿಗೆ ನಾಪತ್ತೆಯಾಗಿದ್ದು, ಈ ಘಟನೆ ತೀವ್ರ ಕುತೂಹಲ ಕೆರಳಿಸಿತ್ತು. ಅದರ ಜೊತೆಗೆ ಹಲವಾರು ಅನುಮಾನಗಳನ್ನೂ ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಈತನಿಗೆ ಹುಡುಕಾಟ ಆರಂಭಿಸಿದ್ದರು.

ರಾಹುಲ್ ತಿವಾರಿ ವಿಕಾಸ್ ದುಬೆ ವಿರುದ್ಧ ಆಸ್ತಿ ಕಬಳಿಕೆ ಆರೋಪ ಹೊರಿಸಿ ಚೌಬೇಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದಕ್ಕೂ ಮೊದಲು ತಿವಾರಿಯನ್ನು ದುಬೆ ಸಹಚರರು ಥಳಿಸಿ, ಅವನ ವಾಹನವನ್ನು ಹೊತ್ತೊಯ್ದಿದ್ದರು. ಇದಕ್ಕೂ ಕೂಡಾ ಚೌಬೇಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.

ಮೂಲಗಳ ಪ್ರಕಾರ, ಜುಲೈ 1ರಂದು ಪೊಲೀಸ್ ಠಾಣೆಯ 4 ಮಂದಿ ರಾಹುಲ್​ ತಿವಾರಿಯ ಮನೆಯ ಭೇಟಿ ನೀಡಿ, ವಿಚಾರಣೆ ನಡೆಸಿ ವಾಪಸ್ಸಾಗಿದ್ದರು. ಇದಾದ ನಂತರವೂ ತಿವಾರಿಯನ್ನು ದುಬೆ ಸಹಚರರು ಥಳಿಸಿದ್ದರು.

ಅದಾದ ಕೆಲವು ದಿನಗಳ ನಂತರ ರಾಹುಲ್​ ತಿವಾರಿ ತನ್ನ ಕುಟುಂಬದೊಂದಿಗೆ ಕಾಣೆಯಾಗಿದ್ದ. ಪೊಲೀಸರು ಈತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಇಂದು ಆತ ಪತ್ತೆಯಾಗಿದ್ದು, ಊಹಾಪೋಹಗಳಿಗೆ ತೆರೆಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.