ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ 84 ವಿದೇಶ ಪ್ರಯಾಣ ಬೆಳೆಸಿ ₹ 1,484 ಕೋಟಿ ವ್ಯಯಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಾಜ್ಯಸಭೆ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ವಿದೇಶಾಂಗ ಖಾತೆಯ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಉತ್ತರಿಸಿದ್ದಾರೆ. ₹ 1,484 ಕೋಟಿ ವೆಚ್ಚವನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ. ವಿಮಾನ ನಿರ್ವಹಣೆ, ಚಾರ್ಟೆಡ್ ಫ್ಲೈಟ್ ಬಾಡಿಗೆ ಹಾಗೂ ವಿದೇಶ ಪ್ರವಾಸಗಳಲ್ಲಿ ಸ್ಟ್ಯಾಂಡ್‌ಬೈ ಸೌಲಭ್ಯಗಳ ಖರ್ಚು ಇದರಲ್ಲಿ ಸೇರಿದೆ.
ಪ್ರಧಾನಿಗಳ ವಿಮಾನಕ್ಕೆ ₹ 1,088.42 ಕೋಟಿ ವ್ಯಯಿಸಲಾಗಿದ್ದು, ಮೊದಲ ಬಾರಿಗೆ ಪ್ರಧಾನಿಯಾದ ಬಳಿಕ 2014 ಜೂನ್ 14ರಂದು ಭೂತಾನ್ಗೆ ಭೇಟಿ ನೀಡಿದ್ದರು. 42 ಪ್ರವಾಸಗಳಲ್ಲಿ 84 ದೇಶಗಳನ್ನು ಸುತ್ತಿದ್ದಾರೆ. ಹತ್ತಿರದ ರಾಷ್ಟ್ರಗಳ ಭೇಟಿಗೆ ಚಾರ್ಟೆಡ್ ವಿಮಾನಗಳನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಮುಖ ಅಂಶಗಳು
ಒಟ್ಟು 175 ದಿನ ಪ್ರವಾಸ
ಜಗತ್ತಿನ ಒಟ್ಟು ರಾಷ್ಟ್ರಗಳ ಪೈಕಿ ಶೇ 28ರಷ್ಟು ದೇಶಗಳಿಗೆ ಪ್ರವಾಸ
84 ದೇಶಗಳಿಗೆ ಪ್ರವಾಸ
ಅತಿಹೆಚ್ಚು ಭೇಟಿ ನೀಡಿದ ರಾಷ್ಟ್ರಗಳು
ಅಮೆರಿಕ- 5
ಚೀನಾ- 5
ರಷ್ಯಾ- 4
ಜರ್ಮನ್- 4
ವರ್ಷ | ರಾಷ್ಟ್ರಗಳ ಭೇಟಿ | ಕಳೆದ ದಿನಗಳು |
2014-15 | 12 | 42 |
2015-16 | 24 | 50 |
2016-17 | 18 | 31 |
2017-18 | 19 | 33 |
2018-19 | 10 | 19 |
ಒಟ್ಟು ಖರ್ಚು ₹ 1,484 ಕೋಟಿ