ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷದ ವಿಚಾರವಾಗಿ ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ್ದ ಮೋದಿ, ಭಾರತದ ಯಾವುದೇ ಭಾಗವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ, ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಹೇಳಿದ್ದರು.
ಚೀನಾ ಸೈನಿಕರು ಭಾರತದ ಗಡಿ ಪ್ರವೇಶ ಮಾಡಿಲ್ಲವೆಂದರೆ ಭಾರತದ 20 ಯೋಧರು ಹುತಾತ್ಮರಾಗಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿತ್ತು. ಹೀಗಾಗಿ ಪ್ರಧಾನಿ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
-
Attempts are being made in some quarters to give a mischievous interpretation to remarks by the PM @narendramodi at All-Party Meeting yesterday
— PIB India (@PIB_India) June 20, 2020 " class="align-text-top noRightClick twitterSection" data="
PM was clear that India would respond firmly to any attempts to transgress the Line of Actual Control
(1/n)
▶️https://t.co/N3tyLtry6X
">Attempts are being made in some quarters to give a mischievous interpretation to remarks by the PM @narendramodi at All-Party Meeting yesterday
— PIB India (@PIB_India) June 20, 2020
PM was clear that India would respond firmly to any attempts to transgress the Line of Actual Control
(1/n)
▶️https://t.co/N3tyLtry6XAttempts are being made in some quarters to give a mischievous interpretation to remarks by the PM @narendramodi at All-Party Meeting yesterday
— PIB India (@PIB_India) June 20, 2020
PM was clear that India would respond firmly to any attempts to transgress the Line of Actual Control
(1/n)
▶️https://t.co/N3tyLtry6X
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸುವ ಯಾವುದೇ ಪ್ರಯತ್ನಗಳಿಗೆ ಭಾರತ ತಕ್ಕ ಉತ್ತರ ನೀಡಲಿದೆ ಎಂದು ಪ್ರಧಾನಿ ತಿಳಿಸಿರುವುದಾಗಿ ಟ್ವೀಟ್ ಮಾಡಿದೆ.
ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಉಲ್ಲಂಘನೆಗೆ ಸಂಬಂಧಿಸಿದಂತೆ, ಜೂನ್ 15 ರಂದು ಗಾಲ್ವಾನ್‌ನಲ್ಲಿ ಉಭಯ ದೇಶಗಳ ಸೈನಿಕರ ಮಧ್ಯೆ ಘರ್ಷಣೆ ನಡೆದಿತ್ತು.