ವಾರಣಾಸಿ (ಉ.ಪ್ರ): ನವೆಂಬರ್ 30 ರಂದು ನಡೆಯಲಿರುವ ‘ದೇವ್ ದೀಪಾವಳಿ’ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ತಲುಪಲಿರುವ ಮೋದಿ ಅಲ್ಲಿಂದ ಯೋಗಿ ಆದಿತ್ಯನಾಥ್ ಭೇಟಿಯಾಗಿ ‘ದೇವ್ ದೀಪಾವಳಿ’ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.
ವಾರಣಾಸಿ - ಪ್ರಯಾಗ್ರಾಜ್ ಸಂಪರ್ಕಿಸುವ ನೂತನ 6 ಪಥದ ಹೆದ್ದಾರಿ ಉದ್ಘಾಟಿಸಲಿರುವ ಮೋದಿ, ಬಳಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಕಾಶಿಯ 84 ಘಾಟ್ಗಳಲ್ಲಿ 15 ಲಕ್ಷ ದೀಪಗಳು ಬೆಳಗಲಿವೆ. ಈ ವೇಳೆ, ಗಂಗಾ ನದಿ ತಟದಲ್ಲಿ ಆಕರ್ಷಕ ಲೇಸರ್ ಶೋ ಕೂಡ ಏರ್ಪಡಿಸಲಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಮೋದಿ, ಯೋಗಿ ಆದಿತ್ಯನಾಥ ಜೊತೆ ಉತ್ತರಪ್ರದೇಶ ರಾಜ್ಯಪಾಲರು ಸಹ ಭಾಗಿಯಾಗುವ ಸಾಧ್ಯತೆ ಇದೆ. ಮೋದಿ ತಮ್ಮ ಸ್ವಕ್ಷೇತ್ರದಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಇದೇ ಮೊದಲ ಬಾರಿಗೆ ಆಗಮಿಸಿದಂತಾಗುತ್ತದೆ. ಆದರೆ, ಅವರ ಭೇಟಿಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.