ETV Bharat / bharat

ಮೋದಿ 2.0 ವಾರ್ಷಿಕೋತ್ಸವ... ದೇಶದ ಜನರಿಗೆ ಪ್ರಧಾನಿ ಪತ್ರ, ಕೊರೊನಾ​ ವಿರುದ್ಧ ಒಗ್ಗಟ್ಟಿನ ಮಂತ್ರ - ಎರಡನೇ ಅವಧಿಯ ಮೊದಲ ವಾರ್ಷಿಕೋತ್ಸವ

ತಮ್ಮ ಎರಡನೇ ಅವಧಿಯ ಮೊದಲ ವಾರ್ಷಿಕೋತ್ಸವ ದಿನದಂದು ನಾನು ಜನರ ಮಧ್ಯೆ ಇರಬೇಕಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಇರುವುದರಿಂದ ಅದು ಸಾಧ್ಯವಿಲ್ಲ ಎಂದು ಹೇಳಿರುವ ಮೋದಿ, ಜನರಿಗೆ ಮುಕ್ತ ಪತ್ರ ಬರೆಯಲು ಕಾರಣಗಳನ್ನು ವಿವರಿಸಿದ್ದಾರೆ.

modi
modi
author img

By

Published : May 30, 2020, 8:49 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶವಾಸಿಗಳಿಗೆ ಮುಕ್ತ ಪತ್ರವೊಂದನ್ನು ಬರೆದು, ಕೋವಿಡ್ -19 ವಿರುದ್ಧದ ಸುದೀರ್ಘ ಯುದ್ಧದಲ್ಲಿ ಭಾರತವು ವಿಜಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.

ಈ ಸಂದರ್ಭಗಳಲ್ಲಿ ನಾನು ಜನರ ಮಧ್ಯೆ ಇರಬೇಕಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಇರುವುದರಿಂದ ಅದು ಸಾಧ್ಯವಿಲ್ಲ ಎಂದು ಹೇಳಿರುವ ಮೋದಿ, ಪತ್ರ ಬರೆಯಲು ಕಾರಣಗಳನ್ನು ವಿವರಿಸಿದ್ದಾರೆ.

ಐತಿಹಾಸಿಕ ನಿರ್ಧಾರಗಳು:

ನಮ್ಮ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡ ಕಾರಣ ಕಳೆದ ಒಂದು ವರ್ಷದಲ್ಲಿ ರಾಷ್ಟ್ರವು ವೇಗವಾಗಿ ಪ್ರಗತಿ ಸಾಧಿಸಿದೆ. ಅನೇಕ ಸವಾಲುಗಳು ಮತ್ತು ಸಮಸ್ಯೆಗಳು ದೇಶದಲ್ಲಿದ್ದು ಅದನ್ನು ನಿವಾರಿಸಬೇಕಿದೆ.

ನಾನು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ಕೆಲ ನ್ಯೂನತೆಗಳು ಇರಬಹುದು ಆದರೆ ನಮ್ಮ ದೇಶಕ್ಕೆ ಏನೂ ಕೊರತೆಯಿಲ್ಲ. ನಾನು ನನಗಿಂತಲೂ ಹೆಚ್ಚು, ನಿಮ್ಮ ಶಕ್ತಿ ಮತ್ತು ಸಾಮರ್ಥ್ಯಗಳನ್ನು ನಂಬುತ್ತೇನೆ ಎಂದು ಬರೆದಿದ್ದಾರೆ.

ಕೋವಿಡ್-19 ಮತ್ತು ವಲಸೆ ಕಾರ್ಮಿಕರು:

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ತನ್ನ ಏಕತೆ ಮತ್ತು ಸಂಕಲ್ಪದಿಂದ ಜಗತ್ತನ್ನು ಅಚ್ಚರಿಗೊಳಿಸಿದ್ದು, ಆರ್ಥಿಕ ಪುನರುಜ್ಜೀವನದಲ್ಲಿಯೂ ಬಲವಾದ ನಂಬಿಕೆ ಇದೆ.

ಈ ಸಂದರ್ಭದಲ್ಲಿ ಯಾರೂ ಸಮಸ್ಯೆಗಳನ್ನು ಎದುರಿಸಿಯೇ ಇಲ್ಲ ಎಂದು ಹೇಳಲಾಗುವುದಿಲ್ಲ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು, ಕುಶಲಕರ್ಮಿಗಳು, ವ್ಯಾಪಾರಿಗಳು ಮತ್ತು ಅನೇಕರು ಕಷ್ಟ ಅನುಭವಿಸಿದ್ದಾರೆ. ಅವರ ಸಮಸ್ಯೆ ನಿವಾರಿಸಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.

ಜನರು ಎದುರಿಸುತ್ತಿರುವ ಅನಾನುಕೂಲತೆಗಳು ವಿಪತ್ತುಗಳಾಗಿ ಬದಲಾಗದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯನೂ ಎಲ್ಲಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ಜನರು ಇಲ್ಲಿಯವರೆಗೆ ತಾಳ್ಮೆಯಿಂದ ಇದ್ದಾರೆ. ಅದನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.

ಭಾರತವು ಸುರಕ್ಷಿತವಾಗಿರಲು ಮತ್ತು ಇತರ ಹಲವು ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿರಲು ಅವರ ತಾಳ್ಮೆಯೇ ಕಾರಣ. ಇದು ಸುದೀರ್ಘ ಯುದ್ಧ, ಆದರೆ ನಾವು ವಿಜಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸಿದ್ದೇವೆ ಮತ್ತು ಗೆಲುವು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರ್ಥಿಕ ಪುನರುಜ್ಜೀವನ:

ಭಾರತ ಸೇರಿದಂತೆ ವಿವಿಧ ದೇಶಗಳ ಆರ್ಥಿಕತೆಗಳು ಹೇಗೆ ಚೇತರಿಸಿಕೊಳ್ಳುತ್ತವೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ತನ್ನ ಏಕತೆ ಮತ್ತು ಸಂಕಲ್ಪದಿಂದ ಜಗತ್ತನ್ನು ಅಚ್ಚರಿಗೊಳಿಸಿದ ರೀತಿಯನ್ನು ಗಮನಿಸಿದರೆ, ಆರ್ಥಿಕ ಪುನರುಜ್ಜೀವನದಲ್ಲೂ ನಾವು ಮಾದರಿಯಾಗಲಿದ್ದೇವೆ ಎಂಬ ದೃಢವಾದ ನಂಬಿಕೆ ಇದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ಆತ್ಮನಿರ್ಭರ ಭಾರತ ಅಭಿಯಾನ:

ಸ್ವಾವಲಂಬನೆ ಸಮಯದ ಅವಶ್ಯಕತೆಯಾಗಿದೆ. ನಾವು ನಮ್ಮ ಸ್ವಂತ ಸಾಮರ್ಥ್ಯಗಳನ್ನು ಆಧರಿಸಿ, ನಮ್ಮದೇ ಆದ ರೀತಿಯಲ್ಲಿ ಮುಂದುವರಿಯಬೇಕಾಗಿದೆ. ಅದನ್ನು ಸಾಧಿಸಲು ಒಂದೇ ಒಂದು ಮಾರ್ಗವೆಂದರೆ ಆತ್ಮನಿರ್ಭರ್ ಭಾರತ್ ಅಥವಾ ಸ್ವಾವಲಂಬಿ ಭಾರತ ಎಂದು ಅವರು ಹೇಳಿದರು.

ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಇತ್ತೀಚೆಗೆ ನೀಡಲಾದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. "ಈ ಕ್ರಮವು ಪ್ರತಿಯೊಬ್ಬ ಭಾರತೀಯರಿಗೂ ಅವಕಾಶಗಳ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ನಮ್ಮ ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಅಥವಾ ಸ್ಟಾರ್ಟ್ ಅಪ್‌ಗಳಿಗೆ ಸಂಬಂಧಿಸಿದಂತೆ ಉತ್ತಮ ಅವಕಾಶ ನೀಡಲಿದೆ.

ಇದು ಖಂಡಿತವಾಗಿಯೂ ಬಿಕ್ಕಟ್ಟಿನ ಸಮಯ, ಆದರೆ ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ನಾವು ನಿರ್ಧರಿಸಬೇಕು. ನಾವು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತೇವೆ ಮತ್ತು ಗೆಲುವು ನಮ್ಮದಾಗುತ್ತದೆ ಎಂದು ಬರೆದಿದ್ದಾರೆ.

ಕಳೆದ ಒಂದು ವರ್ಷದ ಸಾಧನೆ:

ಹಲವಾರು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲಾಯಿತು. ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳ ಪರಿಣಾಮವಾಗಿ ಗ್ರಾಮ ಹಾಗೂ ನಗರದ ಅಂತರ ಕುಗ್ಗುತ್ತಿದೆ.

ಮೊದಲ ಬಾರಿಗೆ, ಅಂತರ್ಜಾಲವನ್ನು ಬಳಸುವ ಗ್ರಾಮೀಣ ಭಾರತೀಯರ ಸಂಖ್ಯೆ ನಗರ ಭಾರತೀಯರ ಸಂಖ್ಯೆಗಿಂತ ಶೇಕಡಾ 10ರಷ್ಟು ಹೆಚ್ಚಾಗಿದೆ.

ಜನಾದೇಶದೊಂದಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳಿದ್ದನ್ನು ತಮ್ಮ ಪತ್ರದಲ್ಲಿ ನೆನಪಿಸಿಕೊಂಡ ಪ್ರಧಾನಿ ಮೋದಿ, ಕಳೆದ ವರ್ಷ ಈ ದಿನದಂದು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಪ್ರಾರಂಭವಾಯಿತು. ಏಕೆಂದರೆ ಹಲವಾರು ದಶಕಗಳ ನಂತರ ಜನರು ಪೂರ್ಣ ಬಹುಮತ ನೀಡಿದ್ದರು.

ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಮತ್ತು ವಿಶ್ವ ಗುರುವನ್ನಾಗಿ ಮಾಡುವ ಕನಸಿನೊಂದಿಗೆ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಕನಸನ್ನು ಈಡೇರಿಸುವಂತಿದೆ ಎಂದರು.

ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ವ್ಯಾಪಕವಾಗಿ ಚರ್ಚಿಸಲ್ಪಟ್ಟಿದ್ದು, ಸಾರ್ವಜನಿಕರಲ್ಲಿ ಅಚ್ಚಳಿಯದೇ ಉಳಿದಿವೆ.

370ನೇ ವಿಧಿಯನ್ನು ರದ್ದುಗೊಳಿಸುವುದರಿಂದ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿತು. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ನೀಡಿದ ರಾಮ ಮಂದಿರ ತೀರ್ಪು, ಶತಮಾನಗಳಿಂದಲೂ ನಡೆಯುತ್ತಿರುವ ಚರ್ಚೆಗೆ ಸೌಹಾರ್ದಯುತವಾದ ಅಂತ್ಯವನ್ನು ತಂದಿತು. ತ್ರಿವಳಿ ತಲಾಕ್ ರದ್ದುಗೊಂಡಿರುವುದು ಅನಾಗರಿಕ ಅಭ್ಯಾಸವನ್ನು ತೊಡೆದು ಹಾಕಿತು. ಪೌರತ್ವ ಕಾಯ್ದೆಗೆ ತಿದ್ದುಪಡಿ ಭಾರತದ ಸಹಾನುಭೂತಿ ಮತ್ತು ಅಂತರ್ಗತ ಮನೋಭಾವವನ್ನು ಸಾರಿ ಹೇಳಿತು.

ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಜನರು ಭಾಗಿಯಾಗಿದ್ದಾರೆ. "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್" ಎಂಬ ಮಂತ್ರದಿಂದ ನಡೆಯುತ್ತಿರುವ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.