ETV Bharat / bharat

ಮಾಲ್ಡೀವ್ಸ್​ ಆಯ್ತು... ಇದೀಗ ಯುಎಇನಿಂದ ಪ್ರಧಾನಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ - ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್

ಪ್ರಧಾನಿ ನರೇಂದ್ರ ಮೋದಿಯ ಮುಂದಿನ ಭೇಟಿ ವೇಳೆ ಯುಎಇ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ದ ಆರ್ಡ​ರ್ ಆಫ್​ ಜಾಯೆದ್​"​ ಅನ್ನು  ಅವರಿಗೆ ನೀಡಲಾಗುವುದು ಎಂದು ಹೇಳಿಕೊಂಡಿದೆ.

ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಪ್ರಧಾನಿ ಮೋದಿ
author img

By

Published : Aug 19, 2019, 11:35 PM IST

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯ ಮುಂದಿನ ಭೇಟಿ ವೇಳೆ ಯುಎಇ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ದಿ ಆರ್ಡ​ರ್ ಆಫ್​ ಜಾಯೆದ್​"​ ಅನ್ನು ಅವರಿಗೆ ನೀಡಲಾಗುವುದು ಎಂದು ಹೇಳಿಕೊಂಡಿದೆ.

ಮೋದಿಯವರು ಆಗಸ್ಟ್ 23 ರಿಂದ ಅಬುಧಾಬಿಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಜೊತೆಗೆ ಬಹ್ರೇನ್‌ ಪ್ರವಾಸ ಕೈಗೊಳ್ಳಲಿದ್ದಾರೆ.

ದಿ ಆರ್ಡರ್​ ಆಫ್​ ಜಾಯೆದ್​ ಪ್ರಶಸ್ತಿಯನ್ನು ಯುಎಇ ಪಿತಾಮಹ ಶೇಖ್​ ಜಾಯೆದ್​ ಬಿನ್​ ಸುಲ್ತಾನ್​ ಅಲ್​ ನಹ್ಯಾನ್​ ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಇದನ್ನು ಅಲ್ಲಿನ ಶ್ರೇಷ್ಟ ನಾಗರಿಕ ಪ್ರಶಸ್ತಿ (ನಮ್ಮಲ್ಲಿನ ಭಾರತ ರತ್ನ) ಎಂದು ಪರಿಗಣಿಸಲಾಗುತ್ತದೆ.

ಸದ್ಯ ನರೇಂದ್ರ ಮೋದಿ ಅಬುಧಾಬಿಗೆ ಭೇಟಿ ನೀಡುವ ವೇಳೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಅವರಿಗೆ ನೀಡಲಾಗುವುದು ಎಂದು ಯುಎಇ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ.

ಅಷ್ಟೇ ಅಲ್ಲದೇ, ಆಗಸ್ಟ್ 6 ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವು ಭಾರತದ ಆಂತರಿಕ ವಿಷಯವಾಗಿದ್ದು, ಇದು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಯುಎಇ ಶ್ಲಾಘಿಸಿದೆ.

ಈ ಹಿಂದೆ ಮಾಲ್ಡೀವ್ಸ್​ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿತ್ತು.

Intro:Body:

ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಪ್ರಧಾನಿ ಮೋದಿ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಗೆ ಭೇಟಿ ನೀಡುವ ವೇಳೆ ಯುಎಇ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ದ ಆರ್ಡ​ರ್ ಆಫ್​ ಜಾಯೆದ್​"​ ಅನ್ನು  ಅವರಿಗೆ ನೀಡಲಾಗುವುದು ಎಂದು ಹೇಳಿಕೊಂಡಿದೆ.

ಮೋದಿಯವರು ಆಗಸ್ಟ್ 23 ರಿಂದ ಅಬುಧಾಬಿಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಜೊತೆಗೆ ಬಹ್ರೇನ್‌ಗೆ ಸಹ ಹೋಗಲಿದ್ದಾರೆ.

ಈ ಹಿಂದೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಉತ್ತೇಜನ ನೀಡಿದ ಮೋದಿಯವರ ವಿಶಿಷ್ಟ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿಯನ್ನು 2019ರ ಏಪ್ರಿಲ್‌ನಲ್ಲಿ ನೀಡಲಾಗಿತ್ತು. ಅದರಲ್ಲೂ, ಯುಎಇ ಸಂಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಪ್ರಶಸ್ತಿಯನ್ನು ಶೇಖ್ ಜಾಯೆದ್ ಅವರ ಜನ್ಮ ಶತಮಾನೋತ್ಸವದಂದು ಮೋದಿಯವರಿಗೆ ನೀಡಿದ ಹಿನ್ನಲೆ ಇದು ವಿಶೇಷ ಮಹತ್ವವನ್ನು ಪಡೆದುಕೊಂಡಿತ್ತು.

ಸದ್ಯ ನರೇಂದ್ರ ಮೋದಿ ಅಬುಧಾಬಿಗೆ ಭೇಟಿ ನೀಡುವ ವೇಳೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ದ ಆರ್ಡ​ರ್ ಆಫ್​ ಜಾಯೆದ್​"​ ಅನ್ನು  ಅವರಿಗೆ ನೀಡಲಾಗುವುದು ಎಂದು ಯುಎಇ ಹೇಳಿಕೊಂಡಿದೆ.

ಅಷ್ಟೇ ಅಲ್ಲದೇ, ಆಗಸ್ಟ್ 6 ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವು ಭಾರತದ ಆಂತರಿಕ ವಿಷಯವಾಗಿದ್ದು, ಇದು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಯುಎಇ ಶ್ಲಾಘಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.