ನವದೆಹಲಿ: ದೇಶದಲ್ಲಿ ಹೊಸ ಸ್ಟಾರ್ಟ್ ಅಪ್ಗಳು ಬೆಳೆಯಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದ್ದು, ಅದಕ್ಕಾಗಿ 1,000 ಕೋಟಿ ರೂ. ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯುವ ಜನರಿಂದ, ಯುವಕರಿಗೆ ಎಂಬ ಮಂತ್ರದ ಮೂಲಕ ಈ ವ್ಯವಸ್ಥೆ ರಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="">
ಸ್ಟಾರ್ಟ್ ಅಪ್ ಇಂಡಿಯಾ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದು,ಇಡೀ ದೇಶ ಇಂದು ಡಿಜಿಟಿಲ್ ಪಾವತಿ ಮಾಡ್ತಿದ್ದು, ಎಲ್ಲ ವಲಯಗಳಲ್ಲೂ ಇದು ಮುಂದುವರೆಯಬೇಕು ಎಂದು ತಿಳಿಸಿದರು. ಇದೇ ವೇಳೆ ಡಿಜಿಟಲ್ ಇಂಡಿಯಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಭಾರತದಲ್ಲಿ 41,000 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಿದ್ದು, ಐಟಿ ಕ್ಷೇತ್ರದಲ್ಲಿ ಸುಮಾರಿ 5,700, ಆರೋಗ್ಯ ಕ್ಷೇತ್ರದಲ್ಲಿ 3,600 ಹಾಗೂ ಕೃಷಿ ಕ್ಷೇತ್ರದಲ್ಲಿ 1,700 ಸ್ಟಾರ್ಟ್ ಅಪ್ ಪ್ರಾರಂಭಗೊಂಡಿವೆ ಎಂದು ತಿಳಿಸಿದರು.