ETV Bharat / bharat

ಕೊರೊನಾ ಲಸಿಕೆ​​ ಶೋಧಿಸಲು ಹೋಗಿ ತಾನೇ ಸಾವಿನ ಮನೆ ಸೇರಿದ ಫಾರ್ಮಸಿಸ್ಟ್​​!​​ - ಕೊರೊನಾ ಸಾವು

ಮಹಾಮಾರಿ ಕೊರೊನಾ ವೈರಸ್​ಗೆ ಔಷಧಿ ಕಂಡು ಹಿಡಿಯುವಲ್ಲಿ ನಿರತನಾಗಿದ್ದ ಫಾರ್ಮಸಿಸ್ಟ್​ ಓರ್ವ ಸೋಡಿಯಂ ನೈಟ್ರೇಟ್ ಬಳಸಿ ರೂಪಿಸಿದ್ದ ಔಷಧಿಯೊಂದನ್ನ ಸೇವಿಸಿ ಮೃತಪಟ್ಟಿದ್ದಾನೆ.

Pharmaceutical expert dies
ಸಾವಿನ ಮನೆ
author img

By

Published : May 8, 2020, 10:58 PM IST

ತೈನಾಂಪೆಟ್(ತಮಿಳುನಾಡು): ಕೊರೊನಾ ವೈರಸ್​​ನಿಂದ ಉಂಟಾಗುವ ಶೀತವನ್ನು ಗುಣಪಡಿಸುವ ಸಲುವಾಗಿ ಸೋಡಿಯಂ ನೈಟ್ರೇಟ್ ಬಳಸಿ ತಯಾರಿಸಿದ್ದ ಔಷಧಿಯನ್ನು ಸೇವಿಸಿದ ಫಾರ್ಮಸಿಸ್ಟ್​​ ಓರ್ವ ಮೃತಪಟ್ಟಿದ್ದಾನೆ.

ಮೃತನನ್ನು ಪೆರುಂಗುಡಿ ಮೂಲದ ಶಿವನೇಶನ್(47) ಎಂದು ಗುರುತಿಸಲಾಗಿದೆ. ಉತ್ತರಾಖಂಡ್​ನ ಖಾಸಗಿ ಬಯೋಟೆಕ್ ಲ್ಯಾಬ್‌ವೊಂದರಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ, ಸದ್ಯ ಚೆನ್ನೈಗೆ ತೆರಳಿ ಕೊಡಂಬಕ್ಕಂನ ಬೂಪತಿ ನಗರದಲ್ಲಿನ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಕೊರೊನಾ ವೈರಸ್​​ಗೆ ಇಡೀ ಪ್ರಪಂಚವೇ ತಲೆ ಕೆಡಿಸಿಕೊಂಡಿದ್ದು, ಇದರ ಲಸಿಕೆ ಹಾಗೂ ಔಷಧಿಗಳನ್ನು ಕಂಡು ಹಿಡಿಯುವಲ್ಲಿ ನಿರತರಾಗಿರುವ ಹಿನ್ನೆಲೆ ಶಿವನೇಶನ್ ಕೂಡ ಪ್ರಯತ್ನ ಪಟ್ಟಿದ್ದಾರೆ. ಸೋಡಿಯಂ ನೈಟ್ರೇಟ್ ಬಳಸಿ ಸೂತ್ರೀಕರಿಸಿದ ಔಷಧಿಯೊಂದನ್ನ ಪ್ರಯೋಗಿಸುವ ಸಲುವಾಗಿ ನಿನ್ನೆ ಸಂಜೆ ಸೇವಿಸಿದ್ದಾರೆ.

ಈ ಸೂತ್ರೀಕರಿಸಿದ ಔಷಧಿ ಸೇವಿಸ ಅಸ್ವಸ್ಥರಾದ ಶಿವನೇಶನ್​ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸಹ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೃತ ವ್ಯಕ್ತಿಯು ಸೋಡಿಯಂ ನೈಟ್ರೇಟ್ ಸೇವಿಸಿರುವುದರಿಂದ ಸಾವೀಗಿಡಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದಾಗ್ಯೂ ಬೇರೆ ಯಾರದ್ದಾದರೂ ಕೈವಾಡವಿದೆಯೇ ಈ ಸಾವಿನಲ್ಲಿ ಎಂಬುದು ಪೋಸ್ಟ್​ ಮಾರ್ಟ್​ಮ್​ ಬಳಿಕ ತಿಳಿಯಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.