ETV Bharat / bharat

ದೇಶದಲ್ಲಿ ಸತತ 4 ದಿನಗಳಿಂದ ಏರುತ್ತಿದೆ ಪೆಟ್ರೋಲ್​ ದರ.. ಹಾಗಾದ್ರೆ ಡೀಸೆಲ್​ ಪರಿಸ್ಥಿತಿ ಏನು?

ಸತತ ನಾಲ್ಕು ದಿನಗಳಿಂದ ಪೆಟ್ರೋಲ್​ ದರ ಏರಿಕೆಯಾಗುತ್ತಲೇ ಇದ್ದು, ಈ ಮೂಲಕ ವರ್ಷದಲ್ಲಿ ಈವರೆಗಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ, ಡೀಸೆಲ್ ದರ ತಟಸ್ಥವಾಗಿದೆ.

Petrol price at 1-year high, diesel stable
author img

By

Published : Nov 25, 2019, 3:51 PM IST

ನವದೆಹಲಿ: ಸತತ 4 ದಿನಗಳಿಂದ ಪೆಟ್ರೋಲ್​ ದರ ಏರಿಕೆಯಾಗುತ್ತಲೇ ಇದೆ. ಈ ಮೂಲಕ ವರ್ಷದಲ್ಲಿ ಈವರೆಗಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ, ಡೀಸೆಲ್ ದರ ತಟಸ್ಥವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ, ತೈಲೋತ್ಪನ್ನ ಕಂಪನಿಗಳು ದರ ಹೆಚ್ಚಿಸಿರುವ ಪರಿಣಾಮ ಭಾರತದಲ್ಲಿ ಪೆಟ್ರೋಲ್​, ಡೀಸೆಲ್​ ದರ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಈ ಮೂಲಕ ವಾಹನ ಸವಾರರ ಕಿಸೆಗೆ ಕತ್ತರಿ ಬೀಳುವ ಸಾಧ್ಯತೆ ಇದೆ.

ದೆಹಲಿ, ಕೋಲ್ಕತ್ತಾದಲ್ಲಿ ಒಂದು ಲೀಟರ್​ ಪೆಟ್ರೋಲ್​​ಗೆ ₹ 12 ಪೈಸೆ, ಮುಂಬೈ ಮತ್ತು ಚೆನ್ನೈನಲ್ಲಿ ₹13 ಪೈಸೆ, ಬೆಂಗಳೂರಿನಲ್ಲಿ ₹7 ಪೈಸೆ ಏರಿಕೆಯಾಗಿದೆ. ಆದರೆ, ಡೀಸೆಲ್​ ದರದಲ್ಲಿ ಬದಲಾವಣೆ ಕಂಡಿಲ್ಲ. ನಾಲ್ಕು ದಿನಗಳಿಂದ ದೆಹಲಿಯಲ್ಲಿ ₹46 ಪೈಸೆ ಹೆಚ್ಚಳವಾಗಿದೆ.

Petrol price at 1-year high, diesel stable
ಇಂದಿನ ದರ

ಭಾರತೀಯ ತೈಲ ನಿಗಮದ ವೆಬ್ ಸೈಟ್ ಪ್ರಕಾರ ಸೋಮವಾರ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ ₹ 74.66, ₹ 77.34, ₹ 80.32 ಮತ್ತು ₹ 77.62 ಪೆಟ್ರೋಲ್​ ದರವಿದೆ. ಭಾನುವಾರ ಲೀಟರ್​ ಪೆಟ್ರೋಲ್​ಗೆ ₹ 74.84,₹ 76.82, ₹ 80.38 ಮತ್ತು ₹ 77.69 ಇತ್ತು.

ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸೋಮವಾರ ಲೀಟರ್​ ಡೀಸೆಲ್​ಗೆ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ ₹ 65.73, ₹ 68.14, ₹ 68.94 ಮತ್ತು ₹ 69.47 ದರವಿದ್ದು, ತಟಸ್ಥ ನಿಲುವು ತಾಳಿದೆ.

ಕಚ್ಚಾ ತೈಲ ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ತಿಂಗಳು ಬ್ಯಾರೆಲ್‌ಗೆ ಸುಮಾರು ಮೂರು ಡಾಲರ್ ಏರಿಕೆಯಾಗಿದೆ.

Intro:Body:

for national 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.