ಲಖನೌ(ಉತ್ತರ ಪ್ರದೇಶ): ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಭಾರತವು ಸಾಕು ಪ್ರಾಣಿಗಳ ಆನ್‌ಲೈನ್ ವ್ಯಾಪಾರವನ್ನು ನಿಷೇಧಿಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.
ಹರಿಯಾಣ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ ಒಎಲ್‌ಎಕ್ಸ್ ಮತ್ತು ಕ್ವಿಕರ್ನ ನೋಂದಾಯಿತ ಕಚೇರಿಗಳಿದ್ದು, ಇಂತಹ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಾಣಿಗಳ ವ್ಯಾಪಾರ ನಿಲ್ಲಿಸಬೇಕು ಎಂದು ಪ್ರಾಣಿ ಹಕ್ಕುಗಳ ಸಂಸ್ಥೆ ಸರ್ಕಾರವನ್ನು ಕೋರಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟಲು ಮತ್ತು ಯಾವುದೇ ರೋಗ ಹರಡುವುದನ್ನು ತಡೆಯಲು ಎಲ್ಲ ಸಾಕು ಪ್ರಾಣಿಗಳ ಅಂಗಡಿಗಳು ಮತ್ತು ನಾಯಿ ಸಾಕಣೆ ಕೇಂದ್ರಗಳು ತಮ್ಮನ್ನು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಯುಪಿ ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ.
ಉತ್ತರ ಪ್ರದೇಶ, ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಸರ್ಕಾರಗಳು ಲಾಕ್ಡೌನ್ ನಂತರ ಅಕ್ರಮ ಸಾಕುಪ್ರಾಣಿ ಅಂಗಡಿಗಳು ಮತ್ತು ನಾಯಿ ತಳಿಗಾರರು ಮತ್ತೆ ಅಂಗಡಿಗಳನ್ನು ತೆರೆಯದಂತೆ ಈಗಾಗಲೇ ಆದೇಶ ಹೊರಡಿಸಿವೆ.
ಪೆಟಾ ಇಂಡಿಯಾ ತನ್ನ ಪತ್ರದಲ್ಲಿ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಹೆಚ್ಚಿನ ಸಾಕುಪ್ರಾಣಿ ಅಂಗಡಿಗಳು ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ವಾನ ತಳಿಗಾರರು ಕಾನೂನಿನ ಪ್ರಕಾರ ನೋಂದಣಿಯಾಗಿಲ್ಲ.