ಚೆನ್ನೈ: ಮೊದಲು ಸಿಎಎ, ಎನ್‌ಆರ್‌ಪಿ ಎಂದರೆ ಏನು ಅನ್ನೋದನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶನಿವಾರ ಮದ್ರಾಸ್ ಐಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಚರ್ಚೆಗೆ ಬಂದಿರುವ ಸಿಎಎ, ಎನ್ಆರ್ಸಿ ಮತ್ತು ಇತರೆ ವಿಷಯಗಳ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಿ. ಇವುಗಳ ಹಿನ್ನೆಲೆ ಏನು ಎಂಬುದನ್ನು ಮೊದಲು ಅಧ್ಯಯನ ಮಾಡಿ ನಂತರ ಒಂದು ತೀರ್ಮಾನಕ್ಕೆ ಬನ್ನಿ ಎಂದಿದ್ದಾರೆ.
ದೇಶದ ಹಿತಾಸಕ್ತಿಗಳಿಗೆ ಧಕ್ಕೆ ತರುವ ಯಾವ ಕೃತ್ಯಕ್ಕೂ ಕೈ ಹಾಕಬೇಡಿ. ನೀವು ಏನು ಮಾಡಬೇಕೋ ಅದನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿಯೇ ಮಾಡಿ. ಏಕೆಂದರೆ, ನಾವು ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತೇವೆ ಎಂದರು.