ವಿಶಾಖಪಟ್ಟಣಂ: ಜನಸೇನಾ ಪಕ್ಷದ ಮುಖ್ಯಸ್ಥ, ತೆಲಗು ನಟ ಪವನ್ ಕಲ್ಯಾಣ್ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
Visakhapatnam: Jana Sena President Pawan Kalyan files nomination papers for Gajuwaka Assembly Constituency at Greater Visakhapatnam Municipal Corporation (GVMC) in Gajuwaka. #AndhraPradesh pic.twitter.com/0QGnKpcSFv
— ANI (@ANI) March 21, 2019 " class="align-text-top noRightClick twitterSection" data="
">Visakhapatnam: Jana Sena President Pawan Kalyan files nomination papers for Gajuwaka Assembly Constituency at Greater Visakhapatnam Municipal Corporation (GVMC) in Gajuwaka. #AndhraPradesh pic.twitter.com/0QGnKpcSFv
— ANI (@ANI) March 21, 2019Visakhapatnam: Jana Sena President Pawan Kalyan files nomination papers for Gajuwaka Assembly Constituency at Greater Visakhapatnam Municipal Corporation (GVMC) in Gajuwaka. #AndhraPradesh pic.twitter.com/0QGnKpcSFv
— ANI (@ANI) March 21, 2019
ವಿಶಾಖ್ ಪಟ್ಟಣಂ ಜಿಲ್ಲೆಯ ಗಜುವಾಕಾ ಹಾಗೂ ಪಶ್ಚಿಮ ಗೋದಾವರಿಯಲ್ಲಿನ ಭೀಮಾವರಂ ವಿಧಾನಸಭೆ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಗಾಗಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ,ಸಿಪಿಐ ಮತ್ತು ಸಿಪಿಐ (ಎಂ) ಜತೆ ಮೈತ್ರಿ ಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶದ ಒಟ್ಟು 175 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬಿಎಸ್ಪಿ,ಏಳು ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಸ್ಪರ್ಧಿಸುತ್ತಿದ್ದು, ಉಳಿದ 140 ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಸ್ಪರ್ಧೆ ಮಾಡುತ್ತಿದೆ. ಜತೆಗೆ 18 ಲೋಕಸಭಾ ಕ್ಷೇತ್ರಗಳಲ್ಲೂ ಫೈಟ್ ಮಾಡಲಿದೆ. ಇನ್ನು ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿದ್ದು, ಏಪ್ರಿಲ್ 11ರಂದು ಮತದಾನ ನಡೆಯಲಿದೆ.