ನವದೆಹಲಿ: ಸಂಸತ್ ಮತ್ತು ರಾಷ್ಟ್ರಪತಿ ಭವನವನ್ನು ಸಂವಿಧಾನ ದಿನದ ನಿಮಿತ್ತ ಮುನ್ನಾದಿನ ಅನೇಕ ಬಣ್ಣಗಳಲ್ಲಿ ಅಲಂಕರಿಸಲಾಯಿತು. ಇದನ್ನು ಪ್ರತಿವರ್ಷ ನವೆಂಬರ್ 26 ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಆಚರಿಸಲಾಗುತ್ತದೆ.
ಭಾರತೀಯ ಸಂವಿಧಾನದ ಕರಡು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಭೀಮ್ ರಾವ್ ಅಂಬೇಡ್ಕರ್ ಅವರಿಗೆ ಗೌರವ ಸೂಚಕವಾಗಿ ಸಂವಿಧಾನ ದಿನವನ್ನು ಮೊದಲ ಬಾರಿಗೆ 2015 ರಲ್ಲಿ ಆಚರಿಸಲಾಗಿದ್ದು, ಮುಂಬೈನಲ್ಲಿ ಸಮಾನತೆಯ ಪ್ರತಿಮೆಯ ಅಡಿಪಾಯ ಹಾಕುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11, 2015 ರಂದು ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಕಾನೂನು ದಿನ ಎಂದು ಆಚರಿಸಲಾಗಿದ್ದ ನವೆಂಬರ್ 26, 1949 ರಲ್ಲಿ ಭಾರತವು ತನ್ನ ಸಂವಿಧಾನವನ್ನು ಮತ್ತೆ ಅಂಗೀಕರಿಸಿದ ದಿನವನ್ನು ಸೂಚಿಸುತ್ತದೆ, 'ಮನ್ ಕಿ ಬಾತ್' ಕಾರ್ಯಕ್ರಮದ 56 ನೇ ಆವೃತ್ತಿಯ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಅವರು, ನವೆಂಬರ್ 26 ಅನ್ನು 'ಇಡೀ ದೇಶಕ್ಕೆ ವಿಶೇಷ ದಿನ' ಎಂದು ಬಣ್ಣಿಸಿದ್ದು, ಮತ್ತು ಸಂವಿಧಾನ ದಿನಾಚರಣೆಯು ಸಂವಿಧಾನವನ್ನು ಎತ್ತಿಹಿಡಿಯುವ ರಾಷ್ಟ್ರದ ಬಾಧ್ಯತೆಯನ್ನು ಬಲಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ದಿನಾಚರಣೆಯು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಸಾಂವಿಧಾನಿಕ ಆದರ್ಶಗಳು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ನಮ್ಮ ಜವಾಬ್ದಾರಿಯನ್ನು ಬಲಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಸಂವಿಧಾನವನ್ನು ರಚಿಸಿದವರ ಕನಸು ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ನವೆಂಬರ್ 26 ರಂದು ಸಂಸತ್ತಿನ ಜಂಟಿ ಅಧಿವೇಶನ ನಡೆಸಲಿದ್ದು. ಅಲ್ಲದೇ, ಭಾರತೀಯ ಜನತಾ ಪಕ್ಷವು 10 ದಿನಗಳ ಸುದೀರ್ಘ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಕೆಲವು ವಿರೋಧ ಪಕ್ಷಗಳು ಅಧ್ಯಕ್ಷ ಕೋವಿಂದ್ ಅವರ ಭಾಷಣವನ್ನು ಬಹಿಷ್ಕರಿಸುವ ಸಾಧ್ಯತೆ ಇದೆ. ಅಲ್ಲದೇ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ವಿರುದ್ಧ ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಲು ಪಕ್ಷಗಳು ಯೋಜಿಸುತ್ತಿವೆ ಎಂದು ತಿಳಿದು ಬಂದಿದೆ.