ETV Bharat / bharat

ಸಂಸತ್ ಬಜೆಟ್​ ಅಧಿವೇಶನ: ಉಭಯ ಸದನಗಳಲ್ಲಿ ಇಂದು ಚರ್ಚೆ ಹೇಗಿತ್ತು ಗೊತ್ತೇ? - ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)

ಇಂದು ದೆಹಲಿ ಸಂಸತ್​ನಲ್ಲಿ ನಡೆದ ಬಜೆಟ್​ ಅಧಿವೇಶನದಲ್ಲಿ ಸಿಎಎ,ಎನ್‌ಆರ್‌ಐಸಿ, ನಿರ್ಭಯಾ ಅತ್ಯಾಚಾರ ಪ್ರಕರಣ, 370ನೇ ವಿಧಿ ರದ್ದತಿ, ಆನ್​ಲೈನ್​ ಬ್ಯಾಂಕಿಂಗ್​ ವಂಚನೆ ಸೇರಿದಂತೆ ಅನೇಕ ವಿವಾದಾತ್ಮಕ ವಿಚಾರಗಳು ಚರ್ಚೆಗೆ ಬಂದವು.

Parliament Budget Session
ಸಂಸತ್ ಬಜೆಟ್​ ಅಧಿವೇಶನ
author img

By

Published : Feb 4, 2020, 11:42 PM IST

ನವದೆಹಲಿ: ಇಂದು ದೆಹಲಿ ಸಂಸತ್​ನಲ್ಲಿ ನಡೆದ ಬಜೆಟ್​ ಅಧಿವೇಶನದಲ್ಲಿ ಸಿಎಎ,ಎನ್‌ಆರ್‌ಐಸಿ, ನಿರ್ಭಯಾ ಅತ್ಯಾಚಾರ ಪ್ರಕರಣ, 370ನೇ ವಿಧಿ ರದ್ದತಿ, ಆನ್​ಲೈನ್​ ಬ್ಯಾಂಕಿಂಗ್​ ವಂಚನೆ ಸೇರಿದಂತೆ ಅನೇಕ ವಿವಾದಾತ್ಮಕ ವಿಚಾರಗಳು ಚರ್ಚೆಗೆ ಬಂದವು. ಮಹಾತ್ಮ ಗಾಂಧಿ ವಿರುದ್ಧ ಅನಂತ್ ಕುಮಾರ್​ ಹೆಗಡೆ ಹೇಳಿಕೆ ವಿರೋಧಿಸಿ ಕಾಂಗ್ರೆಸ್ಸಿಗರು ಲೋಕಸಭೆಯಿಂದ ಹೊರನಡೆದ ಪ್ರಸಂಗವೂ ನಡೆಯಿತು.

  • 2012 ರ ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಅಪರಾಧಿಗಳ ಮರಣದಂಡನೆಯನ್ನು ತ್ವರಿತಗೊಳಿಸುವ ಬೇಡಿಕೆ ಕುರಿತು ಆಮ್​ ಆದ್ಮಿ ಸಂಸದ ಸಂಜಯ್ ಸಿಂಗ್, ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ನೋಟಿಸ್ ನೀಡಿದರು.
  • ಸ್ವಾತಂತ್ರ್ಯ ಹೋರಾಟಗಾರರಲ್ಲಿನ ಕೆಲವರ ಕುರಿತು ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ ಕುಮಾರ್​ ಹೆಗಡೆ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ನಡೆಸಿದವು. ಸದನ ಆರಂಭಗೊಳ್ಳುತ್ತಿದ್ದಂತೆ ಸದನದ ಬಾವಿಗೆ ಇಳಿದು ಪ್ರತಿಪಕ್ಷದ ನಾಯಕರು ಅನಂತಕುಮಾರ್​ ಹೆಗಡೆ ಕ್ಷಮೆಯಾಚನೆ ಮಾಡುವಂತೆ ಪಟ್ಟು ಹಿಡಿದವು. ಈ ವೇಳೆ ಸ್ಪೀಕರ್​ ಓಮ್ ಬಿರ್ಲಾ ಸದನವನ್ನು ಮುಂದೂಡಿಕೆ ಮಾಡಿದರು.
  • ಮಹಾತ್ಮ ಗಾಂಧಿ ವಿರುದ್ಧ ಅನಂತ್ ಕುಮಾರ್​ ಹೆಗಡೆ ಹೇಳಿಕೆ ವಿರೋಧಿಸಿ ಕಾಂಗ್ರೆಸಿಗರು ಲೋಕಸಭೆಯಿಂದ ಹೊರನಡೆದರು. ಇಷ್ಟಾದರೂ ಅನಂತ್ ಕುಮಾರ್​ ಹೆಗಡೆ ಮಾತ್ರ ಗಾಂಧಿ ಕುರಿತು ಒಂದು ಮಾತೂ ಆಡಿಲ್ಲ, ನಾನು ಮಾತನಾಡಿದ್ದು ಸ್ವಾತಂತ್ರ್ಯ ಹೋರಾಟದ ಕುರಿತು ಎಂದು ಹೇಳಿ ಕ್ಷಮೆ ಕೇಳಲು ನಿರಾಕರಿಸಿದರು.
  • ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಹೆಸರಿನಲ್ಲಿ ಭಾರತ ವಿರೋಧಿ ಪ್ರಚಾರದ ಕುರಿತು ಬಿಜೆಪಿ ಸಂಸದ ಆರ್.ಕೆ. ಸಿನ್ಹಾ ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ನೋಟಿಸ್ ನೀಡಿದರು.
  • ಸಿಎಎನಿಂದಾಗಿ ದೇಶದಲ್ಲಿ ಭಯ ಮತ್ತು ಬೆದರಿಕೆಯ ವಾತಾವರಣ ಉಂಟಾಗಿರುವ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹಾಗೂ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಲೋಕಸಭೆಯಲ್ಲಿ ಮುಂದೂಡಿಕೆ ಚಲನೆಯ ನೋಟಿಸ್ ನೀಡಿದರು.
  • ಇದುವರೆಗೂ ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಐಸಿ) ತಯಾರಿಸಲು ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಹೇಳಿದರು.
  • ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಳಂಬವಾಗುತ್ತಿರುವುದಕ್ಕೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ದೆಹಲಿ ಸರ್ಕಾರವನ್ನು ತೆಗಳಿದರು.
  • ಪ್ರತಿಪಕ್ಷದ ಸಂಸದರು ರಾಜ್ಯಸಭೆಯಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.
  • ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದು, 15 ಜನರನ್ನು ಬಂಧಿಸಿರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿತು.
  • ಕಳೆದ ಆರು ವರ್ಷಗಳಿಂದ ಆಡಳಿತ ನಡಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಕಿಡಿಕಾರಿದ ಶಶಿ ತರೂರ್, ಸ್ಟಾರ್ಟ್​-ಅಪ್​​ ಇಂಡಿಯಾ, ಮೇಕ್​ ಇನ್​ ಇಂಡಿಯಾ, ಸ್ಕಿಲ್​ ಇಂಡಿಯಾ ಬದಲಾಗಿ ಸರ್ಕಾರಿ ಯೋಜನೆಗಳಿಗೆ ಸಿಟ್-ಡೌನ್ ಇಂಡಿಯಾ, ಶಟ್​-ಡೌನ್ ಇಂಡಿಯಾ ಹಾಗೂ ಶಟ್​​-ಅಪ್​ ಇಂಡಿಯಾ​​ ಎಂದು ಹೆಸರಿಡಬೇಕು. ಸ್ಟಾಂಡ್​-ಅಪ್​ ಹಾಸ್ಯಗಾರರಿಗೆ ನೀವು ಈಗಾಗಲೇ ನಿಷೇಧಗಳನ್ನ ಹೇರಿರುವುದರಿಂದ 'ಸ್ಟಾಂಡ್​-ಅಪ್ ಇಂಡಿಯಾ'ದ ಬಗ್ಗೆ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
  • ಕಣಿವೆ ರಾಜ್ಯದಲ್ಲಿ 370ನೇ ವಿಧಿ ರದ್ದು ಮಾಡಿರುವುದು ಜಮ್ಮು-ಕಾಶ್ಮೀರದ ವಿಪತ್ತಿಗೆ ಕಾರಣವಾಯಿತೆಂದು ರಾಜ್ಯಸಭೆಯಲ್ಲಿ ಗುಲಾಮ್​ ನಭಿನ ಆಜಾದ್​ ಆರೋಪಿಸಿದರು.
  • 2017-18ರಲ್ಲಿ ಬರೋಬ್ಬರಿ 6,900 ಆನ್​ಲೈನ್​ ಬ್ಯಾಂಕಿಂಗ್​ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಲೋಕಸಭೆಯಲ್ಲಿ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಮಾಹಿತಿ ನೀಡಿದರು.
  • ಪ್ರಸ್ತುತ ಭಾರತದ ಪರಿಸ್ಥಿತಿ 1938ರ ಜರ್ಮನಿಯಂತಿದೆ. ಅವರು ಮುಸ್ಲಿಂರ ಪರಿಸ್ಥಿತಿಯನ್ನು ನಿಖರವಾಗಿ ಹಾಗೆ ಮಾಡುತ್ತಿದ್ದಾರೆ ಎಂದು ಅಸಾದುದ್ದೀನ್ ಒವೈಸಿ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.