ಆಗ್ರಾ: ಉತ್ತರಪ್ರದೇಶದ ಆಗ್ರಾದಲ್ಲಿ ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿದವರಿಗೆ ಸ್ಥಳೀಯ ಪಂಚಾಯಿತಿ ಸದಸ್ಯರು ವಿಚಿತ್ರವಾದ ಶಿಕ್ಷೆ ನೀಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ವಿವಾಹಿತ ಮಹಿಳೆ ಮನೆಗೆ ನುಗ್ಗಿದ್ದ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ರು ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಪಂಚಾಯಿತಿ ಸದಸ್ಯರ ಮುಂದೆ ಈ ಪ್ರಕರಣ ಹೋಗುತ್ತಿದ್ದಂತೆ ಗ್ರಾಮದಲ್ಲಿದ್ದ ಐವರು ಮಹಿಳೆಯರು ಹಾಗೂ ಅವರ ಗಂಡದರಿಂದ ಚಪ್ಪಲಿ ಏಟು ನೀಡುವ ಶಿಕ್ಷೆ ನೀಡಿದ್ದು, 20 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಡಿಸೆಂಬರ್ 18ರಂದು 30 ವರ್ಷದ ಮಹಿಳೆ ಮೇಲೆ ಈ ಕೃತ್ಯವೆಸಗಲಾಗಿದ್ದು, ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿದೆ. ಅತ್ಯಾಚಾರ ನಡೆಸುತ್ತಿದ್ದ ವೇಳೆ ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಕಾಮುಕರು ಹಲ್ಲೆ ಸಹ ನಡೆಸಿದ್ದಾರೆ. ಮನೆಗೆ ಗಂಡ ವಾಪಸ್ ಆದಾಗ ಈ ಘಟನೆ ಬಗ್ಗೆ ಗೊತ್ತಾಗಿದೆ. ತಕ್ಷಣವೇ ಆರೋಪಿಗಳ ಮನೆಗೆ ಹೋಗಿ ಘಟನೆಗೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ. ಈ ವೇಳೆ ಗಂಡನ ಮೇಲೂ ಅವರು ಹಲ್ಲೆ ನಡೆಸಿದ್ದಾರೆ. ಇದಾದ ಮರುದಿನವೇ ಪೊಲೀಸ್ ಠಾಣೆಗೆ ತೆರಳಿ ಆಕೆಯ ಗಂಡ ದೂರು ದಾಖಲು ಮಾಡಿದ್ದನು. ಆದರೆ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಎದುರು ಪ್ರಕರಣ ತೆಗೆದುಕೊಂಡು ಹೋಗಲಾಗಿತ್ತು.