ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪಾಕಿಸ್ತಾನ ತೀವ್ರವಾಗಿ ಟೀಕಿಸುತ್ತಿದ್ದು, ಭೂ ವಿವಾದ ಪ್ರಕರಣದಲ್ಲಿ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ, ನೆರೆಯ ದೇಶವು ಭಾರತದ ಆಂತರಿಕ ವಿಷಯಗಳಿಂದ ದೂರವಿರಬೇಕು, ತನ್ನ ತಪ್ಪುಗಳನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆ ಭೂ ವಿವಾದ ಪ್ರಕರಣದ ಪ್ರಮುಖ ದಾವೆದಾರರಲ್ಲಿ ಒಬ್ಬರಾಗಿದ್ದ ಅನ್ಸಾರಿ, "ಭಾರತದ ಮುಸ್ಲಿಮರು ಮತ್ತು ಹಿಂದೂಗಳು ರಾಮ ಮಂದಿರದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಗೌರವಿಸಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಈ ವಿಷಯದ ಬಗ್ಗೆ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇದು ನಮ್ಮ ಆಂತರಿಕ ವಿಷಯ" ಎಂದಿದ್ದಾರೆ.
"ಪಾಕಿಸ್ತಾನ ಕೋವಿಡ್-19ಗೆ ಔಷಧಿಯನ್ನು ಅಭಿವೃದ್ಧಿಪಡಿಸಿ ಅದನ್ನು ಇಡೀ ಜಗತ್ತಿಗೆ ಪೂರೈಸುವ ಕೆಲಸ ಮಾಡಲಿ. ಇಲ್ಲಿಯವರೆಗೆ ಪಾಕ್ ಒಂದೇ ಒಂದು ಒಳ್ಳೆಯ ಕೆಲಸವನ್ನೂ ಮಾಡಿಲ್ಲ. ಕೋವಿಡ್-19ಗೆ ಔಷಧಿ ಅಭಿವೃದ್ಧಿಪಡಿಸಿ ಇಡೀ ಜಗತ್ತಿಗೆ ಸರಬರಾಜು ಮಾಡುವ ಮೂಲಕ ತನ್ನ ಪಾಪಗಳನ್ನು ಪಾಕ್ ಪರಿಹರಿಸಿಕೊಳ್ಳಲಿ" ಎಂದು ಹೇಳಿದರು.