ನವದೆಹಲಿ: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ ನವದೆಹಲಿಯ ಲೋಧಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಅದಕ್ಕೂ ಮೊದಲು ಅನೇಕ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಕೆ ಮಾಡಿದರು.
ಈ ವೇಳೆ, ಭಾರತದ ಖ್ಯಾತ ಮಸಾಲ ಕಂಪನಿ ಎಂಡಿಹೆಚ್ ಮಾಲೀಕ 96 ವರ್ಷದ ಧರ್ಮಪಾಲ್ ಗುಲಾಟಿ ಸುಷ್ಮಾ ಸ್ವರಾಜ್ ಅವರ ಕಾಲಿನ ಬಳಿ ಕುಳಿತು ಕಣ್ಣೀರು ಹಾಕಿದ್ದಾರೆ. ತ್ರಿವರ್ಣ ಧ್ವಜ ಹೊದಿಸಿದ್ದ ಸುಷ್ಮಾರ ಪಾರ್ಥಿವ ಶರೀರವನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಗುಲಾಟಿಯವರು ತಮ್ಮ ಮಸಾಲ ಉತ್ಪನ್ನದ ಟ್ರೇಡ್ಮಾರ್ಕ್ ಬಣ್ಣವಾದ ಕೆಂಪು ಪಗ್ಡಿ ಧರಿಸಿದ್ದರು. ತಮ್ಮ ಬಗ್ಗೆಯಾಗಲಿ ಅಥವಾ ತಮ್ಮ ವಯಸ್ಸಿನ ಬಗ್ಗೆಯಾಗಲಿ ಚಿಂತಿಸದ ಗುಲಾಟಿ, ಸುಷ್ಮಾರ ಮೃತದೇಹದ ಮುಂದೆ ಗಳಗಳನೆ ಅತ್ತಿದ್ದಾರೆ.