ಮನಾಲಿ (ಹಿಮಾಚಲಪ್ರದೇಶ) : ಭಾರಿ ಹಿಮ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಲ್ಲು ಜಿಲ್ಲೆಯ ಮನಾಲಿಯ ಸೌಥ್ ಪೋರ್ಟಲ್ ಆಫ್ ಅಟಲ್ ಟನೆಲ್ ಮತ್ತು ಸೋಲಾಂಗ್ ನಲ್ಲಾ ನಡುವಿನ ರಸ್ತೆಯಲ್ಲಿ 500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಹೆಚ್ಚು ಹಿಮ ಸುರಿಯುತ್ತಿರುವ ಹಿನ್ನೆಲೆ ರಸ್ತೆಗಳು ಬಂದ್ ಆಗಿದ್ದು, ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ಈ ಹಿನ್ನೆಲೆ ರಸ್ತೆಗಳಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಹಾಗೂ ರಸ್ತೆಯಲ್ಲಿನ ಹಿಮ ತೆರವುಗೊಳಿಸವ ಕೆಲಸ ನಡೆಯುತ್ತಿದೆ ಎಂದು ಮನಾಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಮನ್ ಘರ್ಸಂಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಆಯ್ತು, ಈಗ ಮಧ್ಯಪ್ರದೇಶದಲ್ಲೂ ಕಾಣಿಸಿಕೊಂಡ ಹಕ್ಕಿ ಜ್ವರ
ರಕ್ಷಣಾ ತಂಡಗಳು ರಾತ್ರಿ 8ರ ಸುಮಾರಿಗೆ ಧುಂಡಿಗೆ ತಲುಪಿದ್ದು, ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಟ್ಯಾಕ್ಸಿಗಳು ಹಾಗೂ 48 ಆಸನಗಳ ಬಸ್‌ನ ಕೂಡ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಘರ್ಸಂಗಿ ಹೇಳಿದ್ದಾರೆ.
ಮಂಗಳವಾರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹಿಮಾಚಲಪ್ರದೇಶದಲ್ಲಿ ಭಾರಿ ಹಿಮಪಾತವಾಗುವ ಮುನ್ಸೂಚನೆಯನ್ನ ನೀಡಲಾಗಿತ್ತು. ಈಗ ಅಲ್ಲಿನ ಜನರಿಗೆ ಮುಂಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.