ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು (ಎನ್‌ಆರ್‌ಸಿ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನಿಡಿತ್ತು. ಭಾರತದ ವಿಷಯದಲ್ಲಿ ಏಕೆ ವಿನಾಯಿತಿ ನೀಡಬೇಕು ಎನ್ನುದಕ್ಕಿಂತ ಯಾರೂ ಹೋಗಿ ನೆಲೆಸಲು ಸಾಧ್ಯವಾಗುವಂತಹ ಯಾವುದೇ ದೇಶ ವಿಶ್ವದಲ್ಲಿ ಇಲ್ಲ ಎಂದರು.
ಅಸ್ಸೋಂನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಎನ್‌ಆರ್‌ಸಿ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷವು ದೇಶದ ಜನತೆಗೆ ಆಶ್ವಾಸನೆ ನೀಡಿಲಿದೆ. ಎನ್‌ಆರ್‌ಸಿ ಎಂದರೇ ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ಅಸ್ಸೋಂ ರಾಷ್ಟ್ರೀಯ ನೋಂದಣಿ ಎಂದರ್ಥವಲ್ಲ ಎಂದು ಅವರು ಹೇಳಿದರು.
2019ರಲ್ಲಿ ಜನರು ಈ ಬಗ್ಗೆ ತಮ್ಮ ಅಭಿಪ್ರಾಯಗಳು ನೀಡಿದ್ದಾರೆ ಎಂದು ನಾನು ನಂಬುತ್ತೇನೆ. ಏಕೆಂದರೆ, ನಾವು ಈ ವಿಷಯವನ್ನು ಪ್ರತಿ ಸಮಾವೇಶದಲ್ಲಿ ತಪ್ಪದೇ ಎನ್‌ಆರ್‌ಸಿ ಬಗ್ಗೆ ಪ್ರಸ್ತಾಪಿಸುತ್ತಿದ್ದೇವು. ಹೊರಗಿರುವವರನ್ನು ಕಾನೂನಿನ ಪ್ರಕಾರ ದೇಶದಿಂದ ಕಳುಹಿಸುತ್ತೇವೆ. ದೇಶದಲ್ಲಿ ನೆಲೆಯೂರಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳಲು ಇದು ನೆರವಾಗಲಿದೆ ಎಂದು ಶಾ ಹೇಳಿದರು.