ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದಲ್ಲಿ ಕೊರೊನಾ ಹರಡುವುದಕ್ಕೆ ಪ್ರಮುಖ ಕಾರಣವಾಗಿದ್ದ ತಬ್ಲಿಘಿ ಜಮಾತ್ ಪಾಕಿಸ್ತಾನದಲ್ಲಿಯೂ ಕೂಡಾ ಕೊರೊನಾ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ತೋರುತ್ತದೆ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
Interesting :it seems the Tabalegi Jamat has created problems in Pakistan too with regard to COVID-19.
— Manish Tewari (@ManishTewari) April 8, 2020 " class="align-text-top noRightClick twitterSection" data="
Seems to be a sect issue. Do listen in pic.twitter.com/jfn0PXrJXD
">Interesting :it seems the Tabalegi Jamat has created problems in Pakistan too with regard to COVID-19.
— Manish Tewari (@ManishTewari) April 8, 2020
Seems to be a sect issue. Do listen in pic.twitter.com/jfn0PXrJXDInteresting :it seems the Tabalegi Jamat has created problems in Pakistan too with regard to COVID-19.
— Manish Tewari (@ManishTewari) April 8, 2020
Seems to be a sect issue. Do listen in pic.twitter.com/jfn0PXrJXD
ಪಾಕಿಸ್ತಾನದ ಅರ್ಧದಷ್ಟು ಪ್ರಕರಣಗಳು ಅಲ್ಲಿನ ರಾಜ್ಯ ಪಂಜಾಬ್ನಿಂದ ಬಂದಿದ್ದು, ಕೊರೊನಾ ಸೋಂಕಿತರು ಹೆಚ್ಚಾಗಲು ತಬ್ಲಿಘಿ ಜಮಾತ್ ಕಾರಣ ಎಂದು ಪಂಜಾಬ್ ಪ್ರಾಂತ್ಯದ ಆರೋಗ್ಯ ಮಂತ್ರಿ ಯಾಸ್ಮೀನ್ ರಶೀದ್ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋವೊಂದನ್ನು ಮನೀಶ್ ತಿವಾರಿ ಟ್ವೀಟ್ನಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಯಾಸ್ಮೀನ್ ರಶೀದ್ ಪಾಕಿಸ್ತಾನದಲ್ಲಿ ಒಟ್ಟು 2004 ಪ್ರಕರಣಗಳಿದ್ದು, 547 ಪ್ರಕರಣಗಳು ತಬ್ಲಿಘಿ ಜಮಾತ್ಗೆ ಸಂಬಂಧಪಟ್ಟವು. ಇದರಿಂದ ಪಾಕ್ನಲ್ಲಿ ಸೋಕಿತರ ಸಂಖ್ಯೆ ದಿಢೀರ್ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.
ಇದಕ್ಕೂ ಮೊದಲು ಮನೀಷ್ ತಿವಾರಿ ತಮ್ಮ ಟ್ವೀಟ್ನಲ್ಲಿ '' ತಬ್ಲಿಘಿಗಳು ಈಗಾಗಲೇ ಸಾಕಷ್ಟು ಹಾನಿ ಮಾಡಿದ್ದು, ಜವಾಬ್ದಾರಿಯಿಂದ ಇರಬೇಕು'' ಎಂದು ಚಾಟಿ ಬೀಸಿದ್ದಾರೆ.