ETV Bharat / bharat

ಬ್ಯಾಗ್ ಇಲ್ಲ, ಕವರೂ ಇಲ್ಲ..100ಕ್ಕೂ ಹೆಚ್ಚು ಟಿ-ಶರ್ಟ್​ ಕದ್ದ ಖದೀಮ ಹೀಗೆ ಸಿಕ್ಕಿಬಿದ್ದ..

author img

By

Published : Mar 13, 2020, 9:55 PM IST

ಬೆಳಗ್ಗೆ ಕೆಲಸಕ್ಕೆ ಬಂದಾಗ ಸಣ್ಣಗೆ ಕಾಣುತ್ತಿದ್ದವ ಸಂಜೆ ಹೊರಹೋಗುವಾಗ ದಪ್ಪವಾಗಿರುವುದನ್ನು ಕಂಡು ಮೇಲ್ವಿಚಾರಕ ಅನುಮಾನಗೊಂಡಿದ್ದ. ಆತನನ್ನ ಹಿಡಿದು ಬಟ್ಟೆ ಕಳೆಯುವಂತೆ ಹೇಳಿದಾಗ ಕಳ್ಳತನ ಬಯಲಾಗಿದೆ.

trying to steal 100 T-shirts,100ಕ್ಕೂ ಹೆಚ್ಚು ಟಿ-ಶರ್ಟ್​ ಕದಿಯಲು ಯತ್ನಿಸಿದ ಚಾಲಾಕಿ ಕಳ್ಳ
100ಕ್ಕೂ ಹೆಚ್ಚು ಟಿ-ಶರ್ಟ್​ ಕದಿಯಲು ಯತ್ನಿಸಿದ ಚಾಲಾಕಿ ಕಳ್ಳ

ತಿರುಪ್ಪೂರ್(ತಮಿಳುನಾಡು): ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಒಂದು ಚಿಕ್ಕ ಕವರ್​ ಅಥವಾ ಬ್ಯಾಗ್‌ನ ಬಳಸದೇ ಬರೋಬ್ಬರಿ 100ಕ್ಕೂ ಹೆಚ್ಚು ಟಿ-ಶರ್ಟ್​ಗಳನ್ನು ಕದಿಯಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

100ಕ್ಕೂ ಹೆಚ್ಚು ಟಿ-ಶರ್ಟ್​ ಕದಿಯಲೆತ್ನಿಸಿದ ಚಾಲಾಕಿ ಕಳ್ಳ..

ಬೆಳಗ್ಗೆ ಕೆಲಸಕ್ಕೆ ಬಂದ ವ್ಯಕ್ತಿ ತನ್ನ ಪ್ಯಾಂಟ್ ಮತ್ತು ಅಂಗಿಯೊಳಗೆ ಟಿ-ಶರ್ಟ್​ಗಳನ್ನು ಕಟ್ಟಿಕೊಂಡು ಹೊರ ಹೋಗಲು ಯತ್ನಿಸಿದ್ದಾನೆ. ಬೆಳಗ್ಗೆ ಕೆಲಸಕ್ಕೆ ಬಂದಾಗ ಸಣ್ಣಗೆ ಕಾಣುತ್ತಿದ್ದವ ಸಂಜೆ ಹೊರಹೋಗುವಾಗ ದಪ್ಪವಾಗಿರುವುದನ್ನು ಕಂಡು ಮೇಲ್ವಿಚಾರಕ ಅನುಮಾನಗೊಂಡಿದ್ದಾನೆ.

ಆತನನ್ನು ನಿಲ್ಲಿಸಿ ಬಟ್ಟೆ ಕಳಚುವಂತೆ ಹೇಳಿದಾಗ ಬರೋಬ್ಬುರಿ 100ಕ್ಕೂ ಹೆಚ್ಚು ಟಿ-ಶರ್ಟ್​ಗಳು ಪತ್ತೆಯಾಗಿವೆ. ಉತ್ತರ ಭಾರತ ಮೂಲದ ಈತ ಟಿ-ಶರ್ಟ್​ಗಳನ್ನು ತನ್ನ ಊರಿಗೆ ತೆಗೆದುಕೊಂಡು ಹೋಗಲು ಈ ಕೃತ್ಯ ಎಸಗಿದ್ದಾಗಿ ಬಾಯ್ಬಿಟ್ಟಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.