ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಎನ್ಡಿಎ ಸರ್ಕಾರ ನೂತನ ವರ್ಷದ ಮೊದಲ ದಿನವೇ ಎಲ್ಪಿಜಿ ಗ್ರಾಹಕರಿಗೆ ಶಾಕ್ ನೀಡಿದೆ. ಒಂದು ಸಿಲಿಂಡರ್ಗೆ ₹ 19 ಏರಿಸಿದೆ.
ಅಲ್ಲದೆ, ವೈಮಾನಿಕ ಇಂಧನ (ಎಟಿಎಫ್) ದರದಲ್ಲೂ (ಸಾವಿರ ಲೀಟರ್) 2.6 ರಷ್ಟು (1637.25 ರೂಪಾಯಿ) ಹೆಚ್ಚಿಸಿ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರ ಕಳೆದ ಐದು ತಿಂಗಳಿಂದ ಹಂತ, ಹಂತವಾಗಿ ಎಲ್ಪಿಜಿ ದರವನ್ನು ₹ 139 ಏರಿಸಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ 14.5 ಕೆ.ಜಿ.ಯುಳ್ಳ ಪ್ರತಿ ಸಿಲಿಂಡರ್ಗೂ ₹ 19 ಏರಿಸಿದೆ. ಈ ಮೂಲಕ ಮೊದಲು ₹ 695 ರಷ್ಟಿದ್ದ ದರ ಈಗ ₹ 714 ತಲುಪಿದೆ.
ಕಳೆದ ವರ್ಷ ಜೂನ್ನಿಂದ ಇಲ್ಲಿಯವರೆಗೂ ಪ್ರತಿ ಕಿಲೋ ಲೀಟರ್ಗೂ ಹಂತ ಹಂತವಾಗಿ ದರ ಏರಿಸಿದೆ. ಪ್ರತಿ ಕಿಲೋ ಲೀಟರ್ಗೆ 1,637.25 ರೂ ಏರಿಕೆಯಾಗುವ ಮೂಲಕ ಕಿಲೋ ಲೀಟರ್ ದರ 64,323.76 ರೂಪಾಯಿ ತಲುಪಿದೆ.