ಹೈದರಾಬಾದ್: ಅಮೆರಿಕದ ಸಂಶೋಧಕರಾದ ವಿಲಿಯಂ ಕೆಲಿನ್, ಜಾರ್ಜ್ ಸೆಮೆಂಜಾ ಮತ್ತು ಬ್ರಿಟನ್ನ ಪೀಟರ್ ರಾಟ್ ಕ್ಲಿಫ್ಗೆ ಅತ್ಯುನ್ನತ್ತ ವೈದ್ಯಕೀಯ ನೊಬೆಲ್ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಜೀವಕೋಶಗಳಿಗೆ ಆಮ್ಲಜನಕದ ಅವಶ್ಯಕತೆ ಹಾಗೂ ಜೀವಕೋಶಗಳಲ್ಲಿ ಹೊಂದಿಕೊಳ್ಳಲು ಆಮ್ಲಜನಕ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂಬ ವಿಚಾರವಾಗಿ ನಡೆಸಿದ ಸಂಶೋಧನೆಗಾಗಿ ಇವರಿಗೆ ಈ ನೋಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಅಸೆಂಬ್ಲಿ ತಿಳಿಸಿದೆ. ಆಮ್ಲಜನಕದ ಅವಶ್ಯಕತೆಯ ಬಗ್ಗೆ ತಿಳಿಸಿದ ಜೂರಿ,ಆಮ್ಲಜನಕದ ಪದರಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ ಎಂದು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೆ ಆಮ್ಲಜನಕದ ಕೊರತೆಯಿಂದ ಅನೇಮಿಯ, ಕ್ಯಾನ್ಸರ್ನಂತಹ ಕಾಯಿಲೆ ಬರುತ್ತವೆ ಅದರ ವಿರುದ್ಧ ಹೋರಾಟ ಮಾಡುವ ತಂತ್ರ ತಿಳಿಯಬೇಕೆಂಬುದು ಈ ಸಂಶೋಧನೆಯ ಉದ್ದೇಶವಾಗಿದೆ.