ETV Bharat / bharat

ಹೆಚ್ಚು ದಿನ ಕಣ್ಣಾಮುಚ್ಚಾಲೆ ಆಟ ನಡೆಯಲ್ಲ, ಎಲ್​ಒಸಿ ದಾಟಬೇಕೆಂದಿದ್ದರೆ ನಾವು ದಾಟಿಯೇ ತೀರುತ್ತೇವೆ : ಸೇನಾ ಮುಖ್ಯಸ್ಥ

ಪಾಕ್​ ಭಯೋತ್ಪಾದಕರನ್ನು ಪೋಷಿಸುತ್ತಿದೆ ಮತ್ತು ನಿಯಂತ್ರಿಸುತ್ತಿದೆ. ಗಡಿ ಭಾಗದಲ್ಲಿ ಮತ್ತೆ ಮತ್ತೆ ಕಣ್ಣಾ ಮುಚ್ಚಾಲೆ ಆಟ ನಡೆಯೋದಕ್ಕೆ ಭಾರತ ಎಂದಿಗೂ ಅವಕಾಶ ನೀಡುವುದಿಲ್ಲ. ಗಡಿ ದಾಟಿ ದಾಳಿ ನಡೆಸಬೇಕೆಂದಾದರೆ ಭಾರತ ಖಂಡಿತಾ ದಾಳಿ ನಡೆಸುತ್ತದೆ. ಈ ವಿಚಾರದಲ್ಲಿ ಭಾರತ ಹಿಂದೆ ಮುಂದೆ ನೋಡಲ್ಲ. ಭಾರತ ತನ್ನ ನಿರ್ಧಾರದ ಬಗ್ಗೆ ಬಹಳ ಸ್ಪಷ್ಟವಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಹೇಳಿದ್ದಾರೆ.

ಸೇನಾ ಮುಖ್ಯಸ್ಥ ಬಿಪಿನ್​ ರಾವತ್​
author img

By

Published : Sep 30, 2019, 5:23 PM IST

ನವದೆಹಲಿ: ಗಡಿ ನಿಯಂತ್ರಣ ರೇಖೆ ವಿಚಾರದಲ್ಲಿ ಕಣ್ಣಾ ಮುಚ್ಚಾಲೆ ಆಟ ಹೆಚ್ಚು ದಿನ ನಡೆಯೋದಿಲ್ಲ. ನಮಗೆ ಗಡಿ ದಾಟಬೇಕೆಂದಿದ್ದರೆ ನಾವು ದಾಟಿಯೇ ಸಿದ್ಧ ಎಂದು ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಪಾಕ್​ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಪಾಕಿಸ್ತಾನವು ಬಾಲಾಕೋಟ್ ಭಯೋತ್ಪಾದಕ ಸೌಲಭ್ಯವನ್ನು ಪುನಃ ಸಕ್ರಿಯಗೊಳಿಸಿದೆ. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಉತ್ತಮ ವಾತಾವರಣವನ್ನು ಹಾಳುಗೆಡವಲು ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಭಾರತ ತುಂಬಾ ಸ್ಪಷ್ಟವಾಗಿದೆ.

ಪಾಕ್​ ಭಯೋತ್ಪಾದಕರನ್ನು ನಿಯಂತ್ರಿಸುತ್ತಿದೆ. ಅದರಡಿಯಲ್ಲೇ ಭಯೋತ್ಪಾದಕರ ತಂಡ ಕಾರ್ಯನಿರ್ವಹಿಸುತ್ತಿವೆ. ಗಡಿ ಭಾಗದಲ್ಲಿ ಮತ್ತೆ ಮತ್ತೆ ಕಣ್ಣಾ ಮುಚ್ಚಾಲೆಯ ಆಟ ನಡೆಯೋದಕ್ಕೆ ಭಾರತ ಅವಕಾಶ ನೀಡುವುದಿಲ್ಲ. ಗಡಿ ದಾಟಿ ದಾಳಿ ನಡೆಸಬೇಕೆಂದಾದರೆ ಭಾರತ ಖಂಡಿತಾ ದಾಳಿ ನಡೆಸುತ್ತದೆ. ಅದು ವಾಯುದಾಳಿ ಇರಬಹುದು, ಅಥವಾ ಭೂಮಾರ್ಗದಲ್ಲೂ ಆಗಿರಬಹುದು. ಈ ವಿಚಾರದಲ್ಲಿ ಭಾರತ ಹಿಂದೆ ಮುಂದೆ ನೋಡಲ್ಲ. ಭಾರತ ತನ್ನ ಮುಂದಿನ ನಿರ್ಧಾರದ ಬಗ್ಗೆ ಬಹಳ ಸ್ಪಷ್ಟವಾಗಿದೆ ಎಂದು ರಾವತ್​ ಸ್ಪಷ್ಟಪಡಿಸಿದರು.

ನಾವು ಉಗ್ರರಿಗೆ ಬೆಂಬಲ ನೀಡುತ್ತಿಲ್ಲ ಎಂದು ಪಾಕ್​ ಮತ್ತೆ ಮತ್ತೆ ಹೇಳುತ್ತಾ ಬಂದರೂ, ಭಾರತ ಪಾಕ್​ನ ಸಣ್ಣತನವನ್ನು, ಅದು ಉಗ್ರ ಸಂಘಟನೆಗೆ ನೀಡುತ್ತಿರುವ ಬೆಂಬಲವನ್ನು ಸಾಕ್ಷಿ ಸಮೇತ ತೋರಿಸುತ್ತಾ ಬಂದಿದೆ. ಆರ್ಟಿಕಲ್​ 370ರ ರದ್ದತಿ ಬಳಿಕ ಕಾಶ್ಮೀರದ ಮುಸ್ಲಿಂ ವಿರೋಧಿಗಳ ವಿರುದ್ಧ ಹೋರಾಡುತ್ತೇವೆ ಎಂದು ಪಾಕ್​ ಬಹಿರಂಗವಾಗಿ ಹೇಳಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಅದು ನೀಡುವ ಬೆಂಬಲವನ್ನು ಮೌನವಾಗಿ ಸ್ವೀಕರಿಸಿದಂತಿದೆ. ಪಾಕ್​ನಲ್ಲಿ ಹಲವು ಉಗ್ರ ತರಬೇತಿ ಕೇಂದ್ರಗಳಿವೆ. ಅಲ್ಲಿಂದ ಉಗ್ರರನ್ನು ಇಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ರಾವತ್​ ತಿಳಿಸಿದರು.

ಇನ್ನೊಂದೆಡೆ ನಮ್ಮಲ್ಲಿ ನ್ಯೂಕ್ಲಿಯರ್​ ಬಾಂಬ್​ ಇದೆ ಇದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್,​ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿಂತು ಭಾಷಣ ಬಿಗಿದಿದ್ದಾರೆ. ಅದು ತಮ್ಮ ರಕ್ಷಣೆಗಿರುವ ಆಯುಧಗಳೇ ಹೊರತು, ಯುದ್ಧಕ್ಕೆ ಬಳಸೋ ಶಸ್ತ್ರಾಸ್ತ್ರಗಳಲ್ಲ. ಈ ರೀತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಜಾಗತಿಕ ಸಮುದಾಯ ನಿಮಗೆ ಅವಕಾಶ ನೀಡುತ್ತದೆಯೇ? ಪಾಕ್​ನ ಈ ಬಾಲಿಶ ಹೇಳಿಕೆಗಳು ಶಸ್ತ್ರಾಸ್ತ್ರಗಳ ಬಗೆಗೆ ಅದಕ್ಕಿರುವ ಅನುಚಿತ ತಿಳುವಳಿಕೆಯನ್ನು ತೋರಿಸುತ್ತದೆ ಎಂದು ಬಿಪಿನ್​ ರಾವತ್​ ಕಿಡಿಕಾರಿದ್ದಾರೆ.

Intro:Body:

P Chidambaram

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.