ETV Bharat / bharat

ವಿವಾದ್​ ಸೇ ವಿಶ್ವಾಸ್​​​... ನೇರ ತೆರಿಗೆ ಸಮಸ್ಯೆ ಬಗೆಹರಿಸಲು ಹೊಸ ಬಿಲ್​ ಮಂಡಿಸಲಿರುವ ಸಚಿವೆ ನಿರ್ಮಲಾ! - ವಿವಾದ್​ ಸೇ ವಿಶ್ವಾಸ್

ಕೇಂದ್ರ ಸರ್ಕಾರ ವಿವಾದ್‌ ಸೇ ವಿಶ್ವಾಸ್‌ ಯೋಜನೆಯನ್ನು ತೆರಿಗೆ ಪಾವತಿದಾರರಿಗೆ ನೀಡುತ್ತಿದ್ದು, ಕಾನೂನು ತೊಡಕು, ಇತ್ಯಾದಿ ತಕರಾರುಗಳನ್ನು ಬಗೆಹರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.

Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
author img

By

Published : Feb 5, 2020, 12:38 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಲೋಕಸಭೆಯಲ್ಲಿ ವಿವಾದ್​​ ಸೇ ವಿಶ್ವಾಸ್ ಎಂಬ ಯೋಜನೆ ಪರಿಚಯ ಮಾಡಲಿದ್ದು, ಇದರಿಂದ ​​ ಡೈರೆಕ್ಟ್​​​​ ಟ್ಯಾಕ್ಸ್​​​ ಬಿಲ್​ ಪಾವತಿದಾರರಿಗೆ ಸಹಾಯವಾಗಲಿದೆ. ನೇರ ತೆರಿಗೆಯಲ್ಲಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಈ ಬಿಲ್​ ಪರಿಚಯಿಸಲು ವಿತ್ತ ಸಚಿವೆ ಮುಂದಾಗಿದ್ದು, ಈಗಾಗಲೇ ಮಂಡನೆಯಾಗಿರುವ ಬಜೆಟ್​ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

ತೆರಿಗೆ ವ್ಯಾಜ್ಯಗಳನ್ನ ಕಡಿತಗೊಳಿಸುವ ಉದ್ದೇಶದಿಂದ ಬಜೆಟ್​​ನಲ್ಲಿ ವಿವಾದ್​ ಸೇ ವಿಶ್ವಾಸ್​ ಎಂಬ ಯೋಜನೆ ಪ್ರಕಟಿಸಲಾಗಿದೆ. ಇದರ ಪ್ರಕಾರ ತೆರಿಗೆದಾರರು ತೆರಿಗೆ ಮೊತ್ತ ಪಾವತಿಸಿದರೆ ಅವರಿಗೆ ದಂಡ ಹಾಗೂ ಬಡ್ಡಿಯಿಂದ ವಿನಾಯಿತ ಸಿಗಲಿದೆ. ನೋಟ್​ ಬ್ಯಾನ್​ ವೇಳೆ ಭಾರೀ ಮೊತ್ತದ ಹಣವನ್ನ ಬ್ಯಾಂಕ್​ ಖಾತೆಗೆ ಜಮೆ ಮಾಡಿ, ಹಣದ ಮೂಲ ತಿಳಿಸಲಾಗದ ಕಾರಣ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್​ ಪಡೆದು ಸಂಕಷ್ಟಕ್ಕೆ ಸಿಲುಕೊಂಡಿರುವವರು ಈ ಯೋಜನೆಯಿಂದ ಪಾರಾಗಬಹುದಾಗಿದೆ.

ಈಗಾಗಲೇ 2020-21ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್​ ಮಂಡನೆಯಾಗಿದ್ದು, ತೆರಿಗೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.