ETV Bharat / bharat

ನಾಳೆ ಕುಣಿಕೆ... ಮಗನಿಗೆ ಪೂರಿ, ಸಾಗು ತಿನ್ನಿಸಬೇಕೆಂಬುದು ನಿರ್ಭಯಾ ಆರೋಪಿ ತಾಯಿಯ ಕನವರಿಕೆ - nirbhaya convicts news

ನಾಳೆ ಗಲ್ಲಿಗೇರಲಿರುವ ನಿರ್ಭಯಾ ಅಪರಾಧಿ ವಿನಯ್​ ಶರ್ಮಾ ತಾಯಿ ಆತಂಕಿತಳಾಗಿದ್ದು, ತನ್ನ ಮಗನನ್ನು ಕೊನೆಯದಾಗಿ ನೋಡಬೇಕು. ಆತನಿಗೆ ಪೂರಿ, ಸಾಗು ತಿನ್ನಿಸಬೇಕೆಂದು ಅಧಿಕಾರಿಗಳ ಮುಂದೆ ಅಪೇಕ್ಷೆ ವ್ಯಕ್ತಪಡಿಸಿದ್ದಾಳೆ.

Vinay Sharma
ವಿನಯ್​ ಶರ್ಮಾ
author img

By

Published : Mar 19, 2020, 5:20 PM IST

ನವದೆಹಲಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಅತ್ಯಾಚಾರಿಗಳ ಮರಣದಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ತನ್ನ ಮಗನ ಅಂತಿಮ ಭೇಟಿ ಬಗ್ಗೆ ತಾಯಿ ಮಾತನಾಡಿದ್ದಾಳೆ.

ತನ್ನ ನಿಜ ಹೆಸರನ್ನು ಬಹಿರಂಗಪಡಿಸದೆ 'ನಿರ್ಭಯಾ ಅತ್ಯಾಚಾರಿ ತಾಯಿ' ಎಂದೇ ಕಳಂಕವನ್ನು ಹೊತ್ತಿರುವ ಆರೋಪಿ ವಿನಯ್​ ಶರ್ಮಾ ತಾಯಿ, ತನ್ನ ಮಗನ ಅಂತಿಮ ಭೇಟಿಗಾಗಿ ಎದುರು ನೋಡುತ್ತಿದ್ದಾಳೆ ಅಲ್ಲದೆ, ತನ್ನ ಮಗನ ನೆಚ್ಚಿನ ತಿನಿಸುಗಳಾದ ಪೂರಿ, ಸಬ್ಜಿ (ಸಾಗು) ಹಾಗೂ ಕಚೋರಿಯನ್ನು ತಿನ್ನಿಸಬೇಕೆಂದು ಕಾಯುತ್ತಿದ್ದಾಳೆ.

ಜೈಲಿನ ಸಿಬ್ಬಂದಿ ಇದುವರೆಗೆ ನನ್ನನ್ನು ತಿಹಾರ್​ ಜೈಲಿಗೆ ಆಹಾರ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡೊಯ್ಯಲು ಬಿಟ್ಟಿಲ್ಲ. ಒಂದು ವೇಳೆ ಈ ಬಾರಿ ಅವರು ನನಗೆ ಅವಕಾಶ ಕೊಟ್ಟರೆ ಮಗನಿಗಾಗಿ ಆತನ ಅಚ್ಚುಮೆಚ್ಚಿನ ಪೂರಿ, ಸಬ್ಜಿ ಹಾಗೂ ಕಚೋರಿಯನ್ನು ತೆಗೆದುಕೊಂಡುಹೋಗಿ ಕೊಡುತ್ತೇನೆ ಎಂದು ಹೇಳಿದ್ದಾಳೆ. ಅಲ್ಲದೆ ನಾಳೆ ವಿನಯ್​ ಶರ್ಮಾನನ್ನು, ಇತರ ಮೂರು ಅಪರಾಧಿಗಳೊಂದಿಗೆ ಗಲ್ಲಿಗೇರಿಸಲಾಗುತ್ತಿದ್ದು, ಇದರೊಳಗೆ ಅಂತಿಮವಾಗಿ ನನಗೆ ನನ್ನ ಮಗನನ್ನು ಭೇಟಿ ಮಾಡೋ ಅವಕಾಶ ಸಿಗುತ್ತದೆ ಎಂದು ತಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ, ಅಂದರೆ ಶುಕ್ರವಾರ ಬೆಳಗ್ಗೆ 5.30 ಕ್ಕೆ ತಿಹಾರ್ ಜೈಲಿನಲ್ಲಿ ನಾಲ್ವರು ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತಿದೆ. ಕಳೆದ ಬುಧವಾರ ಅಣಕು ಪ್ರಕ್ರಿಯೆ ತಿಹಾರ್​ ಜೈಲಿನಲ್ಲಿ ನಡೆದಿದೆ.

ವಿನಯ್​ ಶರ್ಮಾ ಸಲ್ಲಿಸಿರುವ ಕ್ಯುರೇಟಿವ್​ ಅರ್ಜಿಯನ್ನು ಜನವರಿ 14ರಂದು ಸುಪ್ರೀಂ ಕೋರ್ಟ್​ಗೆ ನಿರಾಕರಿಸಿತ್ತು. ಅಲ್ಲದೆ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ನಿರಾಕರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.