ರಾಯಗಢ(ಮಹಾರಾಷ್ಟ್ರ): ಬಹುಕೋಟಿ ವಂಚನೆ ಮಾಡಿ ದೇಶದಿಂದ ಪಲಾಯನ ಮಾಡಿರುವ ನೀರವ್ ಮೋದಿಗೆ ಸೇರಿದ ನೂರು ಕೋಟಿ ಮೌಲ್ಯದ ಬಂಗಲೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಕಿಹಿಮ್ ಬೀಚ್ ಸಮೀಪದಲ್ಲಿದ್ದ ನೀರವ್ ಮೋದಿ ಬಂಗಲೆಯನ್ನು 70,00 ಸ್ಕ್ವೇರ್ಫೀಟ್ನಲ್ಲಿ ನಿರ್ಮಾಣವಾಗಿತ್ತು. ಅತ್ಯಂತ ದೊಡ್ಡ ಲೋಹದ ಬೇಲಿ ಹಾಗೂ ಅತಿದೊಡ್ಡ ಗೇಟ್ ಸಹ ಒಳಗೊಂಡಿತ್ತು.
#WATCH Maharashtra: PNB Scam accused Nirav Modi's bungalow in Alibag, Raigad district demolished by authorities. pic.twitter.com/ngrJstNjoa
— ANI (@ANI) March 8, 2019 " class="align-text-top noRightClick twitterSection" data="
">#WATCH Maharashtra: PNB Scam accused Nirav Modi's bungalow in Alibag, Raigad district demolished by authorities. pic.twitter.com/ngrJstNjoa
— ANI (@ANI) March 8, 2019#WATCH Maharashtra: PNB Scam accused Nirav Modi's bungalow in Alibag, Raigad district demolished by authorities. pic.twitter.com/ngrJstNjoa
— ANI (@ANI) March 8, 2019
ಈ ಬಂಗಲೆಯನ್ನು 2009-10ರಲ್ಲಿ ಕಟ್ಟಲಾಗಿತ್ತು. ಸದ್ಯ ವಂಚನೆ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು.
ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಜನವರಿ 25ರಂದು ಆರಂಭವಾಗಿತ್ತು. ಆದರೆ, ಎರಡೇ ದಿನದಲ್ಲಿ ಈ ಕಾರ್ಯ ಸ್ಥಗಿತವಾಗಿತ್ತು. ಬಂಗಲೆ ಒಳಭಾಗದಲ್ಲಿದಲ್ಲಿರುವ ಬೆಲೆಬಾಳುವ ವಸ್ತಗಳನ್ನು ಜಪ್ತಿ ಮಾಡುವ ನಿಟ್ಟಿನಲ್ಲಿ ನೆಲಸಮ ಕಾರ್ಯ ನಿಲ್ಲಿಸಲಾಗಿತ್ತು.