ಲಂಡನ್: ಬುಧವಾರದಂದು ಬಂಧನಕ್ಕೊಳಗಾದ ಬಹುಕೋಟಿ ವಂಚಕ ನೀರವ್ ಮೋದಿಗೆ ಲಂಡನ್ನ ಕೋರ್ಟ್ ಜಾಮೀನು ನಿರಾಕರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸುಮಾರು 13 ಸಾವಿರ ಕೋಟಿ ವಂಚನೆಗೈದು ವಿದೇಶಕ್ಕೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಬುಧವಾರ ಬಂಧಿಸಲಾಗಿತ್ತು.
ನೀರವ್ ಮೋದಿಯನ್ನು ಬಂಧಿಸಿ ಕೆಲ ಗಂಟೆಗಳಲ್ಲಿ ಕೋರ್ಟ್ಗೆ ಹಾಜರುಪಡಿಸಿತ್ತು. ಅವರ ಪರ ವಕೀಲರು ಜಾಮೀನಿಗಾಗಿ 4.5 ಕೋಟಿ ಶ್ಯೂರಿಟಿ ನೀಡಲು ಮುಂದಾಗಿದ್ದರು. ಆದರೆ ನ್ಯಾಯಾಲಯ ಜಾಮೀನನ್ನು ನಿರಾಕರಿಸಿದೆ.
ಈ ಹಿನ್ನೆಲೆಯಲ್ಲಿ ನೀರವ್ ಮೋದಿ ಮಾರ್ಚ್ 29ರವರೆಗೆ ಜೈಲು ಕಂಬಿ ಎಣಿಸಬೇಕಾಗಿದೆ. ಮಾರ್ಚ್ 29ರಂದು ಮುಂದಿನ ವಿಚಾರಣೆ ನಡೆಯಲಿದೆ.