ETV Bharat / bharat

ವೈರಾಣು ನಿರೋಧಕ ರೆಮ್‍ಡೆಸಿವಿರ್ ಮತ್ತು ನೋವು ನಿರೋಧಕ ಔಷಧಿಗಳ ಪರೀಕ್ಷೆಗೆ NIH ಸಜ್ಜು..

ಹೈದರಾಬಾದ್- ರಾಷ್ಟ್ರೀಯ ಆರೋಗ್ಯ ಸಂಸ್ಥೆಯು (NIH)ಸಂಸ್ಥೆಯು ತಾನು ಕ್ಲಿನಿಕಲ್ ಅಧ್ಯಯನವೊಂದನ್ನು ಆರಂಭಿಸಿದ್ದು ಅದರಲ್ಲಿ ಕೊವಿಡ್-19 ಸೋಂಕು ಇರುವ ರೋಗಿಗಳಿಗೆ ಜಿಲೀಡ್ ಸೈನ್ಸಸ್ ಇಂಕ್ ಸಂಸ್ಥೆ ತಯಾರಿಸಿರುವ ವೈರಾಣು ನಿರೋಧಕ ಔಷಧಿಯಾದ ರೆಮ್‍ಡೆಸಿವಿರ್ ಮತ್ತು ನೋವು ನಿರೋಧಕ ಔಷಧಿಯಾದ ಬ್ಯಾರಿಕ್ಟಿನಿಬ್ ಔಷಧಿ- ಈ ಎರಡರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

NIH
ವೈರಾಣು ನಿರೋಧಕ
author img

By

Published : May 13, 2020, 12:12 PM IST

ಕೊರೊನಾ ವೈರಾಣು ಜಗತ್ತನ್ನು ವ್ಯಾಪಿಸತೊಡಗುತ್ತಿದ್ದಂತೆ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಕ್ಲಿನಿಕಲ್ ಅಧ್ಯಯನವೊಂದನ್ನು ಆರಂಭಿಸಿದೆ. ಅದರ ಮೂಲಕ ಕೋವಿಡ್-19 ಸೋಂಕು ಇರುವ ರೋಗಿಗಳಿಗೆ ಜಿಲೀಡ್ ಸೈನ್ಸಸ್ ಇಂಕ್ ಸಂಸ್ಥೆ ತಯಾರಿಸಿರುವ ವೈರಾಣು ನಿರೋಧಕ ಔಷಧಿಯಾದ ರೆಮ್‍ಡೆಸಿವಿರ್ ಮತ್ತು ನೋವು ನಿರೋಧಕ ಔಷಧಿ ಬ್ಯಾರಿಕ್ಟಿನಿಬ್ ಔಷಧಿ- ಈ ಎರಡರ ಕ್ಲಿನಿಕಲ್ ಪರೀಕ್ಷೆ ನಡೆಯಲಿದೆ.

ಹೈದರಾಬಾದ್-ರಾಷ್ಟ್ರೀಯ ಆರೋಗ್ಯ ಸಂಸ್ಥೆಯು (NIH)ಸಂಸ್ಥೆಯು ತಾನು ಕ್ಲಿನಿಕಲ್ ಅಧ್ಯಯನವೊಂದನ್ನು ಆರಂಭಿಸಿದ್ದು ಅದರಲ್ಲಿ ಕೋವಿಡ್-19 ಸೋಂಕು ಇರುವ ರೋಗಿಗಳಿಗೆ ಜಿಲೀಡ್ ಸೈನ್ಸಸ್ ಇಂಕ್ ಸಂಸ್ಥೆ ತಯಾರಿಸಿರುವ ವೈರಾಣು ನಿರೋಧಕ ಔಷಧಿ ರೆಮ್‍ಡೆಸಿವಿರ್ ಮತ್ತು ನೋವು ನಿರೋಧಕ ಔಷಧಿ ಬ್ಯಾರಿಕ್ಟಿನಿಬ್ ಔಷಧಿ- ಈ ಎರಡರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

ಈ ವೈದ್ಯಕೀಯ ಅಧ್ಯಯನದಲ್ಲಿ ಸದ್ಯ ಅಮೆರಿಕಾದಲ್ಲಿ ಕೋವಿಡ್-19 ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿರುವ ವಯಸ್ಕರ ಮೇಲೆ ಕ್ಲಿನಿಕಲ್ ತಪಾಸಣೆ ನಡೆಸಲಾಗುವುದು. 1000ಕ್ಕೂ ಹೆಚ್ಚು ರೋಗಿಗಳಲ್ಲಿ ಮೇಲೆ ತಿಳಿಸಿದ ಚಿಕಿತ್ಸೆಗಳ ಪರಿಣಾಮವನ್ನು ಅಧ್ಯಯನ ನಡೆಸಲಾಗುವುದು. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಚುಅಸ್ ಡಿಸೀಸಸ್ ಸಂಸ್ಥೆಯ ನಿರ್ದೇಶಕ ಆಂತೋನಿ ಫಾಸಿಯವರು ಹೇಳುವ ಪ್ರಕಾರ ನೋವು ನಿರೋಧಕ ಔಷಧವನ್ನು ರೆಮ್‍ಡೆಸಿವಿರ್‌ನೊಂದಿಗೆ ಸೇರಿಸಿ ಪ್ರಯೋಗಿಸುವುದರಿಂದ ಮರಣವನ್ನು ತಡೆಯುವುದನ್ನೂ ಒಳಗೊಂಡಂತೆ ಹೆಚ್ಚಿನ ಲಾಭವೇನಾದರೂ ಇದೆಯೇ ಎಂದು ಈ ಕ್ಲಿನಿಕಲ್ ಪರೀಕ್ಷೆಯಲ್ಲಿ ಅಧ್ಯಯನ ನಡೆಸಲಾಗುವುದು. “ಕೋವಿಡ್-19 ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದವರಿಗೆ ರೆಮ್ಡೆಸಿವಿರ್ ನೀಡಿದಾಗ ಅವರು ಚೇತರಿಸಿಕೊಳ್ಳುವ ಕಾಲಾವಧಿ ಗಣನೀಯವಾಗಿ ಕಡಿಮೆಯಾಗುವುಕ್ಕೆ ಸಾಕಷ್ಟು ಅಂಕಿ ಅಂಶ ಮಾಹಿತಿ ಈಗ ನಮ್ಮಲ್ಲಿದೆ” ಎನ್ನುತ್ತಾರೆ ಫಾಸಿ.

ಎಲಿ ಲಿಲ್ಲಿ ಅಂಡ್ ಕೊ ಕಂಪನಿಯು ಅಲ್ಯುಮಿಯಂಟ್ ಬ್ರ್ಯಾಂಡ್ ಹೆಸರಿನಲ್ಲಿ ಮಾರುವ ಬ್ಯಾರಿಕ್ಟಿನಿಬ್ ಔಷಧಿಯನ್ನು ಸಹ ಕೋವಿಡ್-19 ಸೋಂಕಿತರ ಮೇಲೆ ಪ್ರಯೋಗಿಸಲಾಗಿತ್ತು. ಕೋವಿಡ್-19 ಕಾಯಿಲೆಗೆ ಯಾವುದೇ ಅನುಮೋದಿತ ಚಿಕಿತ್ಸೆ ಸದ್ಯ ಲಭ್ಯವಿಲ್ಲದಿರುವ ಕಾರಣ ರೆಮ್‍ಡೆಸಿವಿರ್ ಔಷಧಿಯ ಕುರಿತು ಹೆಚ್ಚಿನ ಆಸಕ್ತಿವಹಿಸಲಾಗಿದೆ. ಕೋವಿಡ್-19 ಉಸಿರಾಟದ ಸಮಸ್ಯೆಯಿಂದಾಗಿ ಅಮೆರಿಕದಲ್ಲಿ ಈವರೆಗೆ 70,000ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. ಇದೀಗ ರೆಮ್‍ಡೆಸಿವಿರ್‌ನ ಪ್ರತಿದಿನ 200mg (ಮಿಲಿಗ್ರಾಂ) 4 ಡೋಸ್ ಹಾಗೂ ನಂತರದಲ್ಲಿ 100 mgಯ 4 ಡೋಸ್‌ನಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ 10 ದಿನಗಳ ಅವಧಿಯಲ್ಲಿ ನೀಡಲಾಗುತ್ತಿದೆ. ಬ್ಯಾರಿಕ್ಟಿನಿಬ್ ಔಷಧಿಯನ್ನು 4-mg ಡೋಸ್ ಆಗಿ ಆಸ್ಪತ್ರೆಗೆ ದಾಖಲಾಗಿರುವ ಅವಧಿಯಲ್ಲಿ 14 ದಿನಗಳ ಕಾಲ ನೀಡಲಾಗುತ್ತಿದೆ.

ಈ ಎರಡೂ ಔಷಧಿಗಳನ್ನು (ಬ್ಯಾರಿಕ್ಟಿನಿಬ್ ಪ್ಲಸ್ ರೆಮ್‍ಡೆಸಿವಿರ್) ಒಟ್ಟಾಗಿ ತೆಗೆದುಕೊಂಡರೆ ರೋಗದಿಂದ ಬೇಗನೇ ಚೇತರಿಕೆ ಸಾಧ್ಯವೇ ಎಂಬುದನ್ನು ಈಗ ಅಧ್ಯಯನಕಾರರು ಅಧ್ಯಯನ ನಡೆಸುತ್ತಿದ್ದಾರೆ. ಈ ಔಷಧಿಯಿಂದ ಆಗಲಿರುವ ಇನ್ನಿತರ ಪ್ರಯೋಜನಗಳ ಕುರಿತಾಗಿಯೂ ಕ್ಲಿನಿಕಲ್ ಪರೀಕ್ಷೆ ನಡೆಯುತ್ತಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತಾಂಗವು (FDA) ಕೊವಿಡ್ ಸೋಂಕಿತರಿಗೆ ಈ ಔಷಧಿಯನ್ನು ನೀಡಲು ಅನುಮತಿ ಒದಗಿಸಿತಲ್ಲದೇ ಅದರಿಂದ ಇರುವ ತೊಂದರೆಗಿಂತ ಲಾಭಗಳು ಹೆಚ್ಚಾಗಿವೆ ಎಂದು ತಿಳಿಸಿದ್ದನ್ನು ಸ್ಮರಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.